ಕಳಸ ಲೈವ್ ವರದಿ
ಚುನಾವಣಾ ಆಯೋಗ, ಸ್ವೀಪ್ ಸಮಿತಿ, ಚಿಕ್ಕಮಗಳೂರು ಮೂಡಿಗೆರೆ, ತಾಲ್ಲೂಕು ಪಂಚಾಯತಿ ವತಿಯಿಂದ ಲೋಕಸಭಾ ಚುನಾವಣಾ ಮತದಾನ ಜಾಗೃತಿ ಅಭಿಯಾನ ಅಂಗವಾಗಿ ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದುರೆಮುಖದಲ್ಲಿ ಮತದಾನ ಜಾಗೃತಿ ಹಾಗೂ ಮತದಾನ ಪ್ರತಿಜ್ಞೆ ಮತ್ತು ಘೋಷಣೆ ಮೂಲಕ ಜಾಗೃತಿ ಮೂಡಿಸಲಾಯಿತು.

ಮೂಡಿಗೆರೆ ತಾಲ್ಲೂಕು ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀಮತಿ ದಯಾವತಿ ಸಾರ್ವಜನಿಕರಿಗೆ, ಯುವ ಮತದಾರರಿಗೆ,ಹಿರಿಯ ಮತದಾರರಿಗೆ ಮತದಾನ ಮಹತ್ವವನ್ನು ಅವರು ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂಸೆ ಪಿಡಿಒ ಸುಬ್ರಮಣ್ಯ, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಸಂಜೀವಿನಿ ವಲಯ ಮೇಲ್ವಿಚಾರಕರು, ಸಿಬ್ಬಂಧಿಗಳು ಇದ್ದರು.
