
ಕಳಸ ಲೈವ್ ವರದಿ
ಕಳಸದಲ್ಲಿ ನಡೆದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಿಂದಾಗಿ ರಾಜ್ಯಾಧ್ಯಕ್ಷರಾದ ನಾಡೋಜ ಮಹೇಶ್ ಜೋಷಿ ನನ್ನ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯ ಸಮ್ಮೇಳನಕ್ಕೆ ಅವಕಾಶ ಕಲ್ಪಿಸಿಕೊಡುವ ಭರವಸೆಯನ್ನು ನೀಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.

ಕಳಸದ ಸಾಯಿ ಮಂದಿರದಲ್ಲಿ ಇತ್ತೀಚೆಗೆ ನಡೆದ 18 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಂಡನೆಯ ಸಂದರ್ಭದಲ್ಲಿ ಮಾತನಾಡಿದ ಅವರು ಕಳಸದಲ್ಲಿ ನಡೆದ ಸಮ್ಮೇಳನ ರಾಜ್ಯ ಮಟ್ಟದ ಸಮ್ಮೇಳನದ ರೀತಿಯಲ್ಲಿ ಜರುಗಿ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಸಲು ಕಾರಣವಾಯಿತು. ಈ ಸಮ್ಮೇಳನದ ಯಶಸ್ಸಿಗೆ ಸಮಿತಿಯ ಮಹಾ ಪೆÇೀಷಕರು ಹೊರನಾಡಿನ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಶಿಯವರ ಸಂಪೂರ್ಣ ಸಹಕಾರ, ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ. ಕೆ ಬಾಲಕೃಷ್ಣ ಭಟ್, ಪ್ರದಾನ ಕಾರ್ಯದರ್ಶಿ ಎಂ.ಎ ಶೇಷಗಿರಿ, ಸಮಿತಿಯ ಕೋಶಾಧ್ಯಕ್ಷ ಕೆ.ಸಿ.ಧರಣೇಂದ್ರ ಹಾಗೂ ಸಮಾಜದ ಎಲ್ಲ ವರ್ಗದವರ ಒಗ್ಗೂಡುವಿಕೆ ಮನೆಯ ಹಬ್ಬದಂತೆ ಸಂಭ್ರಮಿಸುವಂತೆ ಆಯಿತು. ಸ್ವಚ್ಚತಾ ಕಾರ್ಯದಿಂದ ಹಿಡಿದು ವೇದಿಕೆಯವರೆಗೂ ಎಲ್ಲಾ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ ರೀತಿ ಅಧ್ಬುತ ಎಂದು ಎಲ್ಲಾ ಕಳಸ ಕನ್ನಡ ಮನಸ್ಸುಗಳನ್ನು ಆಭಿನಂದಿಸಿದರು.
ಇದೇ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಭಟ್ ಅವರಿಗೆ ಅಂತರ್ ಜಿಲ್ಲಾ ಸಮ್ಮೇಳನದಲ್ಲಿ ನೀಡಲಾದ ಕನ್ನಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗೌರವವನ್ನು ಸ್ವೀಕರಿಸಿ ಮಾತನಾಡಿದ ಕೆ. ಕೆ ಬಾಲಕೃಷ್ಣ ಭಟ್.ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲರಿಗೂ ವಂದಿಸಿ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ನಡೆಸುವ ರಾಜ್ಯ ಸಮ್ಮೇಳನಕ್ಕೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ತಿಳಿಸಿ ಸ್ವಾಗತ ಸಮಿತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.
18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚೆಕ್ ಹಾಗೂ ನಗದು ವಂತಿಗೆ, ಹಾಗೂ ಕೂಪನ್ ಮಾರಾಟದಿಂದ ಒಟ್ಟು 1207974 ರೂ ಸಂಗ್ರಹವಾಗಿದ್ದು, ಸಮ್ಮೇಳನದ ಸ್ವಾಗತ ಸಮಿತಿ ಮೂಲಕ 1207974 ರೂ ಗಳನ್ನು ಸಮ್ಮೇಳನಕ್ಕೆ ಖರ್ಚು ಮಾಡಲಾಗಿದೆ ಎಂದು ಜಿಲ್ಲಾ ಸಂಚಾಲಕ ಪಾಂಡುರಂಗ ಲೆಕ್ಕಪತ್ರ ಮಂಡನೆ ಮಾಡಿದರು.
ಕಳಸ ಕಸಾಪ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಹೋಬಳಿ ಅಧ್ಯಕ್ಷ ಶೇಖರ ಶೆಟ್ಟಿ, ತಾಲ್ಲೂಕು ಕಾರ್ಯದರ್ಶಿ ಸುಜಯಾ ಸದಾನಂದ, ಕೋಶಾಧಿಕಾರಿ, ಸಮಿತಿಯ ಕೋಶಾದ್ಯಕ್ಷ ಕೆ.ಸಿ.ಧರಣೇಂದ್ರ, ಕಿರಣ್ ಶೆಟ್ಟಿ, ಪ್ರೇಮ್ ಕುಮಾರ್, ನರಸಿಂಹರಾಜಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಎಸ್. ಪೂರ್ಣೇಶ್, ಚಿಕ್ಕಮಗಳೂರು ನಗರ ಘಟಕದ ಕಸಾಪ ಅಧ್ಯಕ್ಷ ಸಚಿನ್ ಹಾಗೂ ಕಸಾಪ ಪದಾಧಿಕಾರಿಗಳು ಇದ್ದರು.
