ಕಳಸ ಲೈವ್ ವರದಿ
ಕಳಸ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣಲಕ್ಷ್ಮೀ ಪದಕ ಹಾರ ಸಮರ್ಪಣೆಯನ್ನು ಬುಧವಾರ ಮಾಡಲಾಯಿತು.

ನೂತನ ಶಿಲಾ ಗುಡಿಯಲ್ಲಿ ಬ್ರಹ್ಮರ ಪುನಃ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣಲಕ್ಷ್ಮೀ ಪದಕ ಹಾರ ಸಮರ್ಪಣೆಯನ್ನು ಮಾಡಿದ ನಂತರ ಪುನಃಪ್ರತಿಷ್ಠಾನೆಯ ಪೂಜಾ ವಿಧಿ ವಿಧಾನಗಳು ನಡೆದು ನಂತರ ಬ್ರಹ್ಮರ ಪುನಃ ಪ್ರತಿಷ್ಠಾಪನೆ ನೆರವೇರಿತು.
ನವಕ ಕಲಶಾಭಿಷೇಕ, ಸಾನಿಧ್ಯ ಹವನ, ಬ್ರಾಹ್ಮಣ ಪೂಜನ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಬ್ರಾಹ್ಮಣ ಸಂತರ್ಪಣೆ ನಡೆಯಿತು.

