ಕಳಸ ಲೈವ್ ವರದಿ
ಶ್ರೀ ಭದ್ರಾ ಮಹಾಗಣಪತಿ ದೇವಸ್ಥಾನ ಕಾರಕ್ಕಿ ಹೊಸಗದ್ದೆ ಕೆ. ಕೆಳಗೂರು. ಶ್ರೀ ದುರ್ಗಾಪರಮೇಶ್ವರಿ- ಸುಗ್ಗಿಯಮ್ಮನವರಿಗೆ ವರ್ಷಾವಧಿ ಸುಗ್ಗಿ ಹಬ್ಬ ಹಾಗೂ ಕೆಂಡೋತ್ಸವ ಅದ್ದೂರಿಯಾಗಿ ಜರುಗಿತು.
ಧಾರ್ಮಿಕ ಹಾಗೂ ಜಾನಪದ ಹಿನ್ನೆಲೆಯುಳ್ಳ ಸುಗ್ಗಿ ಹಬ್ಬಕ್ಕೆ ಊರಿನ ನೂರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ಮಂಗಳವಾರ ಪ್ರಾರಂಭವಾದ ಸುಗ್ಗಿಹಬ್ಬ ಬುಧವಾರದಂದು ಕೆಂಡೋತ್ಸವ ಆಚರಿಸುವ ಮುಖಾಂತರ ವಾರ್ಷಿಕ ಸುಗ್ಗಿಹಬ್ಬ ಸಂಪನ್ನಗೊಂಡಿತು.

