ಕಳಸ ಲೈವ್ ವರದಿ
ಕಳಸ-ಹೊರನಾಡು ರಸ್ತೆ ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬಾಳೆಯಲ್ಲಿ ಸ್ನಾನ ಮಾಡಲೆಂದು ನದಿಗಿಳಿದ ಬಾಲಕಿ ನೀರು ಪಾಲಾದ ಘಟನೆ ಶನಿವಾರ ವರದಿಯಾಗಿದೆ.
ಮೃತಪಟ್ಟ ಬಾಲಕಿ ತಮಿಳುನಾಡಿನ ಹೊಸೂರಿನ ಜಾಹ್ನವಿ(14) ಎಂದು ಗುರುತಿಸಲಾಗಿದೆ.
ತಮಿಳುನಾಡಿನಿಂದ ತನ್ನ ಕುಟುಂಬಸ್ಥರ ಜೊತೆ ಹೊರನಾಡು ದೇವಸ್ಥಾನಕ್ಕೆಂದು ಬಂದವರು ಬೆಳಿಗ್ಗೆ ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿ ನೀರಿನಲ್ಲಿ ಮುಳುಗಿದ್ದಾಳೆ. ತಕ್ಷಣ ನೀರಿನಿಂದ ಮೇಲಕ್ಕೆತ್ತಿ ಕಳಸ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬರಲಾಯಿತಾದರೂ, ಬಾಲಕಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ.

