ಕಳಸ ಲೈವ್ ವರದಿ
ಕಳಸ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಗಾಳಿ ಗುಡುಗಿನೊಂದಿಗೆ ಜೋರಾದ ಮಳೆ ಸುರಿದಿದೆ.
ಕಳೆದ ಕೆಲ ದಿನಗಳಿಂದ ಮಧ್ಯಾಹ್ನದ ಮೇಲೆ ಸಾದಾರಣವಾಗಿ ಸುರಿಯುತ್ತಿದ್ದ ಮಳೆ ಬುಧವಾರ ಸಂಜೆಯಾಗುತ್ತಿದ್ದ ಹಾಗೆ ಬಿರುಸಾದ ಗಾಳಿಯೊಂದಿಗೆ ಮಳೆ ಸುರಿದಿದೆ. ವಿಪರೀತ ಗಾಳಿಯಿಂದಾಗಿ ಒಂದಷ್ಟು ಹೊತ್ತು ಜನರನ್ನು ತಲ್ಲಣ ಗೊಳಿಸಿತು.
ಬೀಸಿದ ಗಾಳಿಗೆ ಕಳಸ-ಬಾಳೆಹೊನ್ನೂರು ಮುಖ್ಯ ರಸ್ತೆಯ ರಸ್ತೆಯ ಕೊಂಡದಮನೆ ಸಮೀಪ ಮರವೊಂದು ರಸ್ತೆ ಮೇಲೆ ಬಿದ್ದು ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕಳಸ ಕೈಮರ ಸಮೀಪ ಮಹಮ್ಮದ್ ಇಬ್ರಾಹಿಂ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ.ಕಳಸ-ಕುದುರೆಮುಖ ಮುಖ್ಯ ರಸ್ತೆಯ ಬೈನೇಕಾಡು ಎಂಬಲ್ಲಿ ಮರಬಿದ್ದು ಕೆಲ ಕಾಲ ರಸ್ತೆ ಸಂಪರ್ಕಗೊಂಡಿತು. ಗೇರುತೋಟ ಸಮೀಪ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು.ಕಲ್ಮಕ್ಕಿಯಲ್ಲಿ ಮರ ಬಿದ್ದು ತೊಂದರೆ ಉಂಟಾಯಿತು..
ಭಾರಿ ಮಳೆಯ ಹಿನ್ನಲೆಯಲ್ಲಿ ಕಳಸ ಮುಖ್ಯ ರಸ್ತೆಯ ತುಂಬಾ ನೀರು ಹರಿದು ಹೊಳೆಯನ್ನು ನೆನಪಿಸುವಂತಾಯಿತು.ಕೆಲ ಕಾಲ ವಾಹನ ಸಂಚಾರ ವಿಲ್ಲದೆ ಮುಖ್ಯ ರಸ್ತೆ ಬಿಕೋ ಅನ್ನುತ್ತಿತ್ತು.
ಭಾರಿ ಗಾಳಿ ಮಳೆಯ ಪರಿಣಾಮ ಕೆಲವೆಡೆ ವಿಧ್ಯುತ್ ಕಂಬಗಳ ಮೇಲೆ ಮರ ಬಿದ್ದ ಪರಿಣಾಮ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.