
ಕಳಸ ಲೈವ್ ವರದಿ
ಕಳಸ ತಾಲೂಕಿನ ಹಿರೇಬೈಲ್ ಬಳಿ ಬಸ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿದೆ.
ಗಾಯಗೊಂಡವರು ಮೂಡಿಗೆರೆಯ ರಘು ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ.
ಮೂಡಿಗೆರೆಯಿಂದ ಕಳಸ ಕಡೆ ಬರುತ್ತಿದ್ದ ಆಲ್ಟೋ ಕಾರು, ಶಿರಸಿಯಿಂದ ಪ್ರವಾಸಕ್ಕೆಂದು ಬಂದ ಬಸ್ ಹೊರನಾಡು ದೇವಸ್ಥಾನಕ್ಕೆ ಬೇಟಿ ನೀಡಿ ಧರ್ಮಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಹಿರೇಬೈಲಿನ ಬಳಿ ಕಾರು ಮತ್ತು ಬಸ್ಸಿನ ನಡುವೆ ಅಘಾತವಾಗಿದೆ.
ಈ ವೇಳೆ ಕಾರಿನಲ್ಲಿದ್ದ ರಘು ಮತ್ತು ಮಂಜುನಾಥ್ ಗೆ ಗಂಭಿರ ಗಾಯವಾಗಿದ್ದು, ಕಳಸ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.