ಕಳಸ ಲೈವ್ ವರದಿ
ಇಲ್ಲಿನ ಕೋಟಿ ತೀರ್ಥದ ಸಮೀಪವಿರುವ ಶ್ರೀ ಇಲ್ವಲೇಶ್ವರ ದುರ್ಗಾಂಬಾ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 5 ಮತ್ತು 6 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ‘ಅಷ್ಟಬಂಧ ಮತ್ತು ಪುನರ್ ಪ್ರತಿಷ್ಠಾಪನಾ ಮಹೋತ್ಸವ’ ಅತ್ಯಂತ ಸಡಗರ ಸಂಭ್ರಮದಿAದ ಜರುಗಲಿದೆ.
ಮಾರ್ಚ್ 5, ಗುರುವಾರ (ಸಂಜೆ 5:00 ರಿಂದ) ವಾಸ್ತುಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮಗಳು ನಡೆಯಲಿವೆ. ನಂತರ ಕಳಸ ಪ್ರತಿಷ್ಠೆ ಹಾಗೂ ಬಿಂಬ ಶುದ್ಧಿ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ.
ಮಾರ್ಚ್ 6, ಶುಕ್ರವಾರ (ಬೆಳಿಗ್ಗೆ 11:45 ರ ವೃಷಭ ಲಗ್ನದಲ್ಲಿ) ಸಪರಿವಾರ ಶ್ರೀ ಇಲ್ವಲೇಶ್ವರ ದುರ್ಗಾಂಬಾ ಮಹಾಗಣಪತಿ ದೇವರುಗಳ ಅಷ್ಟಬಂಧ ಮತ್ತು ಪುನರ್ ಪ್ರತಿಷ್ಠೆ ನೆರವೇರಲಿದೆ. ತದನಂತರ ಜೀವ ಕುಂಭಾಭಿಷೇಕ, ಕಳಶಾಭಿಷೇಕ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಊರಿನ ಹತ್ತು ಸಮಸ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಿದ್ದಾರೆ.
