ಕಳಸ ಲೈವ್ ವರದಿ
ಹಿರೇಬೈಲು: ಇಲ್ಲಿನ ಹಿರೇಬೈಲು ಸಂಸ್ಕೃತಿ ಮಂದಿರದಲ್ಲಿ ಶ್ರೀ ವಿಘ್ನೇಶ್ವರ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ವತಿಯಿಂದ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಮಾರ್ಚ್ 4, 2026ರ ಬುಧವಾರದಂದು ವಿಜೃಂಭಣೆಯಿ0ದ ನಡೆಯಲಿದೆ.
ವಾರ್ಷಿಕೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 10:00 ಗಂಟೆಯಿAದ ಮಧ್ಯಾಹ್ನ 12:30ರ ವರೆಗೆ ಸಾರ್ವಜನಿಕ “ಶ್ರೀ ಸತ್ಯನಾರಾಯಣ ಪೂಜೆ” ನೆರವೇರಲಿದೆ. ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ನಡೆದು, ತೀರ್ಥ ಪ್ರಸಾದ ವಿನಿಯೋಗದ ನಂತರ ಭಕ್ತಾದಿಗಳಿಗೆ “ಅನ್ನ ಸಂತರ್ಪಣೆ” ಏರ್ಪಡಿಸಲಾಗಿದೆ.
ಈ ಪೂಜಾ ಕಾರ್ಯಕ್ರಮದ ಸೇವಾ ರಶೀದಿಯನ್ನು 200 ರೂಪಾಯಿ ಪಾವತಿಸಿ ಭಕ್ತರು ಪಡೆದುಕೊಳ್ಳಬಹುದಾಗಿದೆ.
