ಕಳಸ ಲೈವ್ ವರದಿ
ಪ್ರಾಬ್ಲಂ ಕಂಡ್ರೀ
ಕಳಸ-ಬಸ್ರಿಕಟ್ಟೆ ಮುಖ್ಯ ರಸ್ತೆ ರಸ್ತೆಯ ತೋಟದೂರು ಎಂಬಲ್ಲಿ ರಸ್ತೆಗೆ ಮರ ಬಿದ್ದು ಮೂರು ದಿನಗಳಾದರೂ ಅದನ್ನು ತೆರವು ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ.
ಈ ರಸ್ತೆಯಲ್ಲಿ ಬಸ್ರಿಕಟ್ಟೆ ಮಾರ್ಗವಗಿ ಶೃಂಗೇರಿಗೆ ಪ್ರತಿ ದಿನ ನೂರಾರು ವಾಹನಗಳು ತೆರಳುತ್ತವೆ.ಕಳೆದ ಮೂರು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ಈ ರಸ್ತೆಯಲ್ಲಿ ಮರವೊಂದು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ತಕ್ಷಣ ಸ್ಥಳಿಯರು ವಾಹನ ಹೋಗುವಷ್ಟು ಮರದ ಕೊಂಬೆಗಳ ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಆದರೆ ಇದಾಗಿ ಮೂರು ದಿನ ಕಳೆದರೂ ಕೂಡ ರಸ್ತೆ ಬಿದ್ದ ಮರವನ್ನು ತೆರವು ಮಾಡಲು ಯಾರೂ ಮುಂದೆ ಬಂದಿಲ್ಲ.ಇದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೀರ ತೊಂದರೆ ಉಂಟಾಗುತ್ತಿದ್ದು, ಸಂಬಂಧಪಟ್ಟವರು ಕೂಡಲೇ ರಸ್ತೆಗೆ ಬಿದ್ದ ಮರವನ್ನು ತೆರವು ಗೊಳಿಸಬೇಕು ಎಂದು ಈ ರಸ್ತೆಯಲ್ಲಿ ನಿತ್ಯ ಓಡಾಡುವ ಶ್ರೀಕಾಂತ್ ಒತ್ತಾಯಿಸಿದ್ದಾರೆ.

