
ಕಳಸ ಲೈವ್ ವರದಿ
ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹ ಯೋಜನೆಯಡಿ ಕಳಸದ ಕಲಶೇಶ್ವರ ದೇವಸ್ಥಾನದಲ್ಲಿ ಭಾನುವಾರ ಒಂದು ಜೊತೆ ವಿವಾಹ ಕಾರ್ಯ ನೆರವೇರಿತು.

ಕಳಸ ಕಂಚಿನಕೆರೆಯ ಅಕ್ಷತ, ಶೃಂಗೇರಿ ನೆಮ್ಮಾರಿನ ನವೀನ ಮಾಂಗಲ್ಯ ಭಾಗ್ಯ ಯೋಜನೆಯಡಿ ಸಪ್ತಪದಿ ತುಳಿದರು.ದೇವಸ್ಥಾನದ ಅರ್ಚಕ ಅನಂತ ಪದ್ಮನಾಭ ಭಟ್ ವಿವಾಹ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಿದರು.
ದೇವಸ್ಥಾನದ ವತಿಯಿಂದ ವಿವಾಹಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ವರನಿಗೆ 5 ಸಾವಿರ , ವಧುವಿಗೆ 10 ಸಾವಿರ ರೂ ಹಾಗೂ 40 ಸಾವಿರ ಮೌಲ್ಯದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ನೀಡಲಾಯಿತು.
ವಧು_ವರರ ಬಂಧುಗಳಿಗೆ ಊಟೋಪಾಚರದ ವ್ಯವಸ್ಥೆಯನ್ನು ದೇವಸ್ಥಾನದಲ್ಲಿ ಮಾಡಲಾಗಿತ್ತು.

ಕಳಸ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪ್ರೇಮಲತಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯ ಸತೀಶ್ ಕಲ್ಲಾನೆ, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ದೇವಾಲಯದ ನೌಕರರಾದ ಸತೀಶ್, ಜಗದೀಶ್ ಭಟ್, ವಾಸು ಭಟ್ ವಿವಾಹ ಕಾರ್ಯಕ್ಕೆ ಸಾಕ್ಷಿಯಾದರು.
