ಕಳಸ ಲೈವ್ ವರದಿ
ವಿವಾಹಿತ ಆಟೋ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಳಸ ತಾಲೂಕಿನ ಮೈದಾಡಿ ಮಹೇಶ್(35) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಮರಸಣಿಗೆಯಲ್ಲಿ ಆಟೋ ಮತ್ತು ಪಿಕಪ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ ಮಹೇಶ್ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿ ಹೆಂಡತಿ ಹಾಗೂ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಹಿರೇಬೈಲಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು ಎನ್ನಲಾಗಿದೆ.
ಸೋಮವಾರ ಬೆಳಿಗ್ಗೆ ಮೈದಾಡಿಯ ಮೇಲ್ ಮೈತಾಲ್ ಖಾನ್ ಪ್ರದೇಶದಿಂದ ತನ್ನ ಸ್ನೇಹಿತರಿಗೆ ಕರೆ ಮಾಡಿ ನನಗೆ ಹೊಟ್ಟೆ ನೋವು ಆಸ್ಪತ್ರೆಗೆ ಸೇರಿಸಿ ಎಂದು ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕೆ ಬಂದಾಗ ರಸ್ತೆ ಬದಿಯಲ್ಲಿ ತನ್ನ ಆಟೋ ನಿಲ್ಲಿಸಿ ವಿಷ ಕುಡಿದು ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಳಸ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.ಅಷ್ಟೋತ್ತಿಗಾಗಲೇ ಮಹೇಶ್ ಇಹ ಲೋಕ ತ್ಯಜಿಸಿದ್ದರು.ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
