ಕಳಸ ಲೈವ್ ವರದಿ
ಹುಲ್ಲು ಕೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಡುಕೋಣ ದಾಳಿ ಮಾಡಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ರುಗುಡಿಗೆ ಗ್ರಾಮದ ಆನಂಬಿ ವಿಶ್ವನಾಥ ಭಟ್(60) ಎಂಬುವವರು ಗಾಯವಾದ ವ್ಯಕ್ತಿ.
ವಿಶ್ವನಾಥ್ ಭಟ್ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಡು ಕೋಣ ಏಕಾಏಕಿ ದಾಳಿ ಮಾಡಿದೆ.ದಾಳಿ ಮಾಡಿದ ಪರಿಣಾಮ ಎದೆಗೆ ಬಲವಾದ ಗಾಯವಾಗಿತ್ತು.ಕೂಡಲೇ ಗಾಯಾಳುವನ್ನು ಕಳಸ ಖಾಸಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.



