
ಕಳಸ ಲೈವ್ ವರದಿ
ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಸರಕಾರಿ ಪ್ರೌಢ ಶಾಲೆ ಹಿರೇಬೈಲ್ ನಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರಾಧಿಕಾರಿ ದಿವಾಕರ ಪೂಜಾರಿ ರವರು ಭಾಗವಹಿಸಿ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಮುರಳೀಧರ ಭಟ್, ಶೌರ್ಯ ಘಟಕದ ಕ್ಯಾಪ್ಟನ್ ಅಜಿತ್ ಕುಲಾಲ್, ಶಾಲಾ ಶಿಕ್ಷಕರಾದ ಕರಿಯಪ್ಪ, ಶ್ರೀಮತಿ ಅಶ್ವಿನಿ, ಗ್ರಾಮ ಪಂಚಾಯತ್ ಸದಸ್ಯರಾದ ಸೂರ್ಯಪ್ರಕಾಶ್, ಶೌರ್ಯ ಘಟಕದ ಸ್ವಯಂ ಸೇವಕರಾದ ರವಿ ಶೆಟ್ಟಿ, ವಲಯ ಮೇಲ್ವಿಚಾರಕರಾದ ಶ್ರೀನಿವಾಸ್, ಸೇವಾಪ್ರತಿನಿಧಿ ಸದಾನಂದ ರವರು ಉಪಸ್ಥಿತರಿದ್ದರು.




