ಕಳಸ ಲೈವ್ ವರದಿ
‘ವಿದ್ಯಾರ್ಥಿಜೀವನದಲ್ಲಿಯೇ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಳ್ಳಲು ಎನ್.ಎಸ್.ಎಸ್ ನಂತಹ ಶಿಬಿರಗಳು ನೆರವಾಗಲಿದೆ ಎಂದು ಕಾಲೇಜು ಸಿ.ಡಿ.ಸಿ ಕಾರ್ಯಾಧ್ಯಕ್ಷ ಹಿತ್ಲುಮಕ್ಕಿ ರಾಜೇಂದ್ರ ಹೆಬ್ಬಾರ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನು, ಬಾಳೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಈ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಶಿಬಿರದಲ್ಲಿನ ಚಟುವಟಿಕೆಗಳು ವ್ಯಕ್ತಿತ್ವ ವಿಕಸನವನ್ನುಂಟು ಮಾಡುವುದರೊಂದಿಗೆ ಹೊಸ ಪರಿಸರದಲ್ಲಿನ ಜನರೊಂದಿಗೆ ಒಡನಾಟಕ್ಕೆ ಕಾರಣವಾಗುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ’ ಎಂದು ಹೇಳಿದರು.
ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್ ರವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಶಿಬಿರಾದಿಕಾರಿ ಸುಧೀರ್ ಜೈನ್ಎಂ.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ವಹಿಸಿದ್ದರು.ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಸಂತೋಷ್ ಕೆ.ಬಿ, ನಿವೇದಿತಾ ಎನ್., ವಿಶು ಕುಮಾರ್ ಎನ್., ಯೋಗ ಗುರು ವೈ. ಪ್ರೇಮ್ಕುಮಾರ್ ಇದ್ದರು.