


ವರದಿ ಕಳಸ ಲೈವ್
ಕಳಸ ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟದೂರು ಟಿ.ಎಸ್. ಸುಬ್ರಮಣ್ಯ(86) ಇವರು ದೀರ್ಘ ಕಾಲದ ಅನಾರೋಗ್ಯದಿಂದ ಸೋಮವಾರ ಬೆಂಗಳೂರಿನಲ್ಲಿ ಮೃತರಾಗಿದ್ದಾರೆ.
ಇವರು ತೋಟದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ, ಕಳಸ ಕಲಶೇಶ್ವರ ದೇವಸ್ಥಾನದ ಕನ್ವಿನರ್ ಆಗಿ, ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರು ಇದ್ದಾರೆ.ಮೃತರ ಅಂತ್ಯಕ್ರೀಯೆ ಸೋಮವಾರ ಬೆಂಗಳೂರಿನಲ್ಲಿ ನಡೆಯಿತು.
