ಕಳಸ ಲೈವ್ ವರದಿ
ಇಂದಿನ ಕಾಲದಲ್ಲಿ ಜ್ಯೋತಿಷ್ಯ ಒಂದು ವ್ಯಾಪಾರ ವಾಗಿದೆ. ಶಾಸ್ತ್ರಬದ್ದವಾಗಿಲ್ಲದೆ ಅದರ ಮೂಲಸ್ವರೂಪಕ್ಕೆ ದಕ್ಕೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್ ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿರುವ ಶ್ರಾವಣ ಸಂಜೆ ಯೋಗ ಧ್ಯಾನ ಮತ್ತು ಮಾತು ಮಂಥನದ ಮೂರನೇ ದಿನದ ಕಾರ್ಯಕ್ರಮದಲ್ಲಿ ಯೋಗದಲ್ಲಿ ಧ್ಯಾನ ಮತ್ತು ಜ್ಯೋತಿಷ್ಯ ಎಂಬ ವಿಷಯವಾಗಿ ಉಪನ್ಯಾಸ ನೀಡಿದ ಅವರು ಅವರು ಹಿಂದಿನ ಕಾಲದಲ್ಲಿ ಜ್ಯೋತಿಷ್ಯಕಾರನು ಧ್ಯಾನ ಹಾಗೂ ಯೋಗ ಇವುಗಳಲ್ಲಿ ಪರಿಣಿತಿ ಹೊಂದಿರುತ್ತಿದ್ದರು. ಧ್ಯಾನ ಎಕಾಗ್ರತೆ ಮನಸ್ಸನ್ನು ಹತೋಟಿಯೊಂದಿಗೆ ಕೇಳುಗನ ನಾಡಿಮಿಡಿತ ಅವನ ಭಾವನೆಗಳನ್ನು ಅರಿತು ಅವನ ಅರೋಗ್ಯ ಅವನ ಅರ್ಥಿಕ ಪರಿಸ್ಥಿತಿ ಅವನ ಎಲ್ಲಾ ಸಮಸ್ಯೆಗಳಿಗೂ ತನ್ನ ದಿವ್ಯ ದೃಷ್ಟಿಯಂದ ಅವನ ಎಲ್ಲಾ ಸಮಸ್ಯಗಳಿಗೆ ನಿಕರವಾದ ಪರಿಹಾರ ಈ ಒಂದು ಕ್ರಮದಲ್ಲಿ ಬಗೆಹರಿಸುತ್ತಿದ್ದರು. ಇಂದು ಜ್ಯೋತಿಷ್ಯ ಒಂದು ವ್ಯಾಪರವಾಗಿದೆ. ಶಾಸ್ರಬದ್ದವಾಗಿಲ್ಲದೆ ಅದರ ಮೂಲಸ್ವರೂಪಕ್ಕೆ ದಕ್ಕೆಯಾಗಿದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅ.ರಾ. ಸತೀಶ್ಚಂದ್ರ ಮಾತನಾಡಿ ಜ್ಯೋತಿಷ್ಯ ಇಂದು ವ್ಯಾಪಾರಿಕರಣವಾಗಿದೆ ಅದರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಮ್ತಾಜ್ ಬೇಗಂ ಮಾತನಾಡಿ ಜ್ಯೋತಿಷ್ಯ ಬಂದು ವಿಜ್ಞಾನ ಅದು ಗ್ರಹ ಮತ್ತು ರಾಶಿಗಳ ಲೆಕ್ಕಾಚಾರದಲ್ಲಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ ಎಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿನಯ್ ಕುಮಾರ್ ಶೆಟ್ಟಿ, ಜೆಇಎಂ ಶಾಲೆಯ ಅಧ್ಯಕ್ಷ ಶ್ರೀಕಾಂತ್, ಯೋಗ ಗುರು ಪ್ರೇಮ್ ಕುಮಾರ್. ಕಸಾಪ ಸದಸ್ಯರಾದ ಸುಮನಾ ಜಯರಾಜ್, ಕಲ್ಪನಾ ಅಜಿತ್, ಗೀತಾ ಮಕ್ಕಿಮನೆ, ಜಾನಕಿ ಸುಂದರೇಶ್ ಇತರರು ಇದ್ದರು.