ಕಳಸ ಲೈವ್ ವರದಿ
ಶಿಕ್ಷಣ ಯೋಗ ಒಂದಕ್ಕೊಂದು ಬೆರೆತುಕೊಂಡಿದೆ ಇದರಿಂದ ಮಕ್ಕಳ ಮೇಲೆ ಆಗುವ ಪರಿಣಾಮ ಅದ್ಭುತ ಅವರ ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿನಯ್ ಕುಮಾರ್ ಶೆಟ್ಟಿ ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಶಿಕ್ಷಣದಲ್ಲಿ ಯೋಗ ಕುರಿತು ಉಪನ್ಯಾಸ ನೀಡಿದ ಅವರು ಶಿಕ್ಷಣ ಯೋಗ ಒಂದಕ್ಕೊಂದು ಬೆರೆತುಕೊಂಡಿದೆ ಇದರಿಂದ ಮಕ್ಕಳ ಮೇಲೆ ಆಗುವ ಪರಿಣಾಮ ಅದ್ಭುತ ಅವರ ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸುತ್ತದೆ ಹಾಗೂ ಶಿಕ್ಷಣದಲ್ಲಿ ಏಕಾಗ್ರತೆಯನ್ನು ಮೂಡಿಸುತ್ತದೆ ಉದ್ವಿಗ್ನತೆಯನ್ನು ಕಡಿಮೆಗೊಳಿಸುತ್ತದೆ ಸದೃಢತೆಯ ಮತ್ತು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು ತಮ್ಮ ಕಾಲೇಜಿನಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರೇಮ್ ಕುಮಾರ್ ರವರಿಂದ ಕಾಲೇಜಿನ ಮಕ್ಕಳು ನಡುವಳಿಕೆಯಲ್ಲಿ ಪ್ರಗತಿಯನ್ನು ಕಂಡಿದೆ ವಿದ್ಯಾರ್ಥಿಗಳ ಭೌತಿಕ ಮಟ್ಟ ಹೆಚ್ಚಿಸುವಲ್ಲಿ ಸಹಾಯಕವಾಗಿದೆ ಹಾಗೂ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಇದು ಯೋಗದಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಮ್ತಾಜ್ ಬೇಗಂ ಅವರು ಮಾತನಾಡಿ ಶಿಕ್ಷಣ ಮತ್ತು ಯೋಗ ಒಂದಕ್ಕೊಂದು ಪೂರಕವಾಗಿದೆ. ಇದು ವಿದ್ಯಾರ್ಥಿಗಳ ಮನೋಸ್ಥೆರ್ಯವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ ಹಾಗೂ ನಿತ್ಯ ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಯೋಗ್ಯ ಮನುಷ್ಯನಾಗಿ ರೂಪುಗಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅ.ರಾ. ಸತೀಶ್ವಂದ್ರ ಅವರು ಮಾತನಾಡಿ ಯೋಗ ಶಿಕ್ಷಣವು ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಸಿದರೆ ಇದು ಅವರ ಜೀವನ ಉನ್ನತ ಮಟ್ಟದಲ್ಲಿ ಹಾಗೂ ಸಂಸ್ಕಾರವಿತವಾಗಿ ಹಾಗೂ ಅವರಲ್ಲಿ ಸದೃಢತೆಯನ್ನು ಮತ್ತು ಬುದ್ದಿಮಟ್ಟ ಹೆಚ್ಚಿಸುವಲ್ಲಿ ಸಹಾಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಜಾಪ ಅಧ್ಯಕ್ಷ ಅಜಿತ್ ಕುಮಾರ್, ಹಿರಿಯ ಸಾಹಿತಿಗಳಾದ ಆ.ರಾ. ರಾಧಾಕೃಷ್ಣ, ಜಾನಕಿ ಸುಂದರೇಶ್, ಮಲ್ಲಿಕಾರ್ಜುನ, ಗೀತಾ ಮಕ್ಕಿಮನೆ, ಕಲ್ಪನಾ ಅಜಿತ್ ಇತರರು ಇದ್ದರು.