ಕಳಸ ಲೈವ್ ವರದಿ
ಸಂಘ ಸಂಸ್ಥೆಯಲ್ಲಿ ಮಹಿಳೆ ಪಾತ್ರ ಅತಿ ಜವಾಬ್ದಾರಿಯುತವಾಗಿ ಇರುತ್ತದೆ ಎಂದು ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷರಾ ಶ್ರೀಮತಿ ಸುಜಯ ಸದಾನಂದ ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುತ್ತಿರುವ ಶ್ರಾವಣ ಸಂಜೆ ಕಾರ್ಯಕ್ರಮದ ಯೋಗ ಧ್ಯಾನ ಮತ್ತು ಮಾತು ಮಂಥನ ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಯಲ್ಲಿ ಮಹಿಳೆಯ ಪಾತ್ರ ಎಂಬ ವಿಷಯವಾಗಿ ಮಾತನಾಡಿದ ಅವರು ಸಂಘ ಸಂಸ್ಥೆಯಲ್ಲಿ ಮಹಿಳೆ ಪಾತ್ರ ಅತಿ ಜವಾಬ್ದಾರಿಯುತವಾಗಿ ಇರುತ್ತದೆ ಇಲ್ಲಿ ಪುರುಷರ ಸಮಾನವಾಗಿ ಕಾರ್ಯನಿರ್ವಹಿಸುವುದು ಕೆಲವೊಂದು ವಿಚಾರದಲ್ಲಿ ಮಹಿಳೆಯರಿಗೆ ಕಷ್ಟ ಸಾಧ್ಯ ಆದರೆ ಈ ಎಲ್ಲ ಕಾರ್ಯಕ್ರಮದಲ್ಲಿಯೂ ಮಹಿಳೆಗೆ ಪುರುಷನ ಬೆಂಬಲವೂ ಬೇಕಾಗುತ್ತದೆ ಜವಾಬ್ದಾರಿಯನ್ನು ತೆಗೆದುಕೊಳ್ಳುವಾಗ ನಾವು ಆದಷ್ಟು ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವಿಷಯದಲ್ಲಿ ನಮ್ಮನ್ನು ಗಮನಿಸುತ್ತಿರುತ್ತಾರೆ ಅದು ವಸ್ತ್ರ ಸಂಹಿತೆ ಆಗಿರಬಹುದು ಅಥವಾ ನಾವು ಮಾತನಾಡುವ ರೀತಿ ಆಗಿರಬಹುದು ನಾವು ಆ ಜವಾಬ್ದಾರಿಯುತನದ ಸ್ಥಾನಕ್ಕೆ ಚುತಿ ಬರದ ರೀತಿಯಲ್ಲಿ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅ.ರಾ.ಸತೀಶ್ಚಂದ್ರ ಮಾತನಾಡಿ ಸಂಘ ಸಂಸ್ಥೆಗಳಲ್ಲಿ ಮಹಿಳೆಯರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಾರೆ ಅವರು ಅದನ್ನು ಶ್ರದ್ದೆಯಿಂದ ಹಾಗೂ ಬದ್ಧತೆಯಿಂದ ಅದನ್ನು ವ್ಯವಹರಿಸುತ್ತಾರೆ. ಸಾಕಷ್ಟು ತಪ್ಪುಗಳು ಆಗದ ರೀತಿಯಲ್ಲಿ ಅವುಗಳನ್ನು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು ಎಂದು ಹೇಳಿದ ಅವರು ಈ ಎಲ್ಲ ವಿಚಾರಗಳಿಗೂ ಯೋಗ ಮತ್ತು ಧ್ಯಾನವು ಪೂರಕವಾಗಿ ಕೆಲಸ ನಿರ್ವಹಿಸುತ್ತದೆ ಕಾರಣ ನಮ್ಮಲ್ಲಿರುವ ಅನೇಕ ಗೊಂದಲಗಳನ್ನು ಹಾಗೂ ತಾಳ್ಮೆ ಸಮ್ಯತೆ ಇವುಗಳು ಸಹ ಇಲ್ಲಿ ಸಹಾಯವನ್ನು ಮಾಡುತ್ತದೆ. ಇವು ಮುಕ್ತ ಮನಸ್ಸಿನಿಂದ ಶಾಂತವಾದ ಮನಸ್ಸಿನಿಂದ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಘಟಕದ ಅಧ್ಯಕ್ಷರಾದ ಮಮ್ತಾಜ್ ಬೇಗಂ, ಯೋಗ ಶಿಕ್ಷಕ ವೈ ಪ್ರೇಮ್ ಕುಮಾರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಪಾಂಡುರಂಗ ಡಾ|ಜಾನಕಿ ಸುಂದರೇಶ್, ಕವಿಯತ್ರಿ ಗೀತಾ ಮಕ್ಕಿಮನೆ, ಮಲ್ಲಿಕಾರ್ಜುನ, ಶರೀಫ್, ಅಜಿತ್ ಪ್ರಸಾದ್, ಸುಮನಾ ಜಯರಾಜ್ ಇತರರು ಇದ್ದರು.