ಕಳಸ ಲೈವ್ ವರದಿ
ಸಮಾಜದಲ್ಲಿ ಮುಖ್ಯವಾಗಿದ್ದುಕೊಂಡು ತಮ್ಮದೇ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಮುಖವಾಗಿ ಕಾರ್ಯವನ್ನು ಮಾಡುತ್ತಾ ಬಂದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕಳಸ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರಾವಣ ಸಂಜೆ ಕಾರ್ಯಕ್ರಮದ ಯೋಗ ಧ್ಯಾನ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಸಾರ್ಥಕ ಬದುಕು ಎಂಬ ವಿಚಾರವಾಗಿ ಮಾತನಾಡಿದ ಅವರು ತಂದೆ ತಾಯಿ ಶಿಕ್ಷಕರು ಜೀವನಕ್ಕೆ ಭದ್ರ ಬುನಾದಿಯ ಹಾಕುವವರು ಬೆಳದಂತೆ ನಮ್ಮನ್ನು ನಾವು ಅರಿಯಬೇಕು ಜೀವನದ ಕೌಶಲ್ಯಗಳನ್ನು ಅರಿತು ಆಯ್ಕೆ ಸೂಕ್ತವಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು. ಅದಕ್ಕೆ ಶರೀರಿಕವಾಗಿ ಬೌದ್ಧಿಕವಾಗಿ ಆಧ್ಯಾತ್ಮಿಕವಾಗಿ ಮಾನಸಿಕವಾಗಿ ಭಾವನಾತ್ಮಕವಾಗಿ ಆರ್ಥಿಕವಾಗಿ ಸದೃಢರಾಗಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅ.ರಾ. ಸತೀಶ್ಚಂದ್ರ ಅವರು ಮಾತನಾಡಿ ಸಮಾಜದಲ್ಲಿ ಎಲ್ಲರು ವ್ಯಕ್ತಿತ್ವವನ್ನು ಬೆಳಿಸಿಕೊಳ್ಳಬೇಕು. ಇದಕ್ಕೆ ತಾಳ್ಮೆ, ಸಹನೆ ,ಚಿಂತನೆ ಮತ್ತು ಸಂಯಮ ಇವು ಮುಖ್ಯ ಕಾರಣಗಳಾಗುತ್ತವೆ. ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು ಇದು ಸಮಾಜಕ್ಕೆ ಪೂರಕವಾಗಿ ಇರಬೇಕೆಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ಪಾಂಡುರಂಗ ಯೋಗ ಶಿಕ್ಷಕರಾದ ವೈ ಪ್ರೇಮ್ ಕುಮಾರ್, ಶ್ರೀಮತಿ ಸುಜಯ ಸದಾನಂದ, ಅಜಿತ್ ಪ್ರಸಾದ್, ಮಲ್ಲಿಕಾರ್ಜುನ್, ರಜಿತ್ ಕೆಳಗೂರು, ಶರೀಫ್ ಇದ್ದರು.
Related Stories
September 18, 2024