ಕಳಸ ಲೈವ್ ವರದಿ
ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿ, ಪ್ರೀತಿಸಿ ಭೂಮಿ ತಾಯಿ ಎಂದು ಕೈಬಿಡುವುದಿಲ್ಲಿ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ರಜಿತ್ ಕೆಳಗೂರು ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ ಶ್ರಾವಣ ಸಂಜೆ ಕಾರ್ಯಕ್ರಮದ ಯೋಗಧ್ಯಾನ ಮತ್ತು ಮಾತು ಮಂಥನ ಕಾರ್ಯಕ್ರಮದಲ್ಲಿ ಜಾನಪದ ಮತ್ತು ಕೃಷಿ ವಿಚಾರವಾಗಿ ಮಾತನಾಡಿದ ಅವರು ಜಾನಪದ ಕೃಷಿ ಬದುಕಿನ ಒಂದು ಭಾಗವಾಗಿದೆ. ಹಳ್ಳಿಯಲ್ಲಿ ಮಹಿಳೆಯರು ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಣ ಎಂದು ಭೂಮಿತಾಯಿಗೆ ವಂದಿಸಿ ತನ್ನ ನಿತ್ಯದ ಕೃಷಿ ಕಾರ್ಯವನ್ನು ಪ್ರಾರಭಿಸುತ್ತ ಅದರಲ್ಲಿ ಸುಖವನ್ನು ಕಾಣುತ್ತಿದ್ದಳು. ನಾಗರಿಕತೆಯು ಬೆಳೆದಂತೆ ಇದು ಇಂದು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದೆ. ಇದು ಮುಂದಿನ ಮಕ್ಕಳಿಗೆ ತಿಳಿಸಿ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ವಸ್ತು ಸಂಗ್ರಾಲಯದಲ್ಲಿ ಕಾಣಬೇಕು. ನಮ್ಮ ಮಲೆನಾಡಿನ ಜಾನಪದ ಕಲೆಯಾದ ಅಂಟಿಗೆ ಪಿಂಟಿಗೆ, ಹಲ್ಲಿ ಕುಣಿತ ಇದನ್ನು ಉಳಿಸಿ ಬೆಳಸ ಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದರ ಬಗ್ಗೆ ಅಸಕ್ತಿ ಬೇಳಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಮ್ತಾಜ್ ಬೇಗಂ ಅವರು ಮಾತನಾಡಿ ಕೃಷಿಯನ್ನು ತಮ್ಮೊಂದಿಗೆ ಪ್ರೀತಿಯಿಂದ ತೊಡಗಿಸಿಕೊಳ್ಳಿ ಅದು ಯಾರನ್ನು ಕೈ ಬಿಡುವುದಿಲ್ಲ. ನಮ್ಮ ಮಲೆನಾಡಿನಲ್ಲಿ ಬೆಳೆಯುತ್ತಿದ್ದ ಹಣ್ಣು ಹಂಪಲುಗಳನ್ನು ಅವುಗಳನ್ನು ಸಂರಕ್ಷಿಸಿ ಕಾಪಾಡುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅ.ರಾ ಸತೀಶ್ಚಂದ್ರ ಮಾತನಾಡಿ ಕೃಷಿ ಮಾನವನ ದಿನನಿತ್ಯ ಬದುಕಿನೊಂದಿಗೆ ಹೊಂದಿಕೊಂಡಿದೆ ಕೃಷಿಕಾಯಕವನ್ನು ಪ್ರೀತಿಯಿಂದ ಅನುಭವಿಸಬೇಕು ಭೂಮಿ ತಾಯಿ ಯಾರನ್ನೂ ಕೈಬಿಡುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಹೆಚ್.ಆರ್. ಪಾಂಡುರಂಗ, ಜಾನಕಿ ಸುಂದರೇಶ್, ಲೀಲಾ ಶ್ರೀಕಾಂತ್, ಪ್ರೇಮ್ ಕುಮಾರ್, ಅಜಿತ್ ಪ್ರಸಾದ್, ಹೆಚ್. ಅರ್.ಪ್ರಶಾಂತ್, ಮಲ್ಲಿಕಾರ್ಜುನ್, , ಸುಮನಾ ಜಯರಾಜ್ ಇತರರು ಇದ್ದರು.