ಕಳಸ ಲೈವ್ ವರದಿ
ವಿಶ್ವ ಹಿಂದೂ ಪರಿಷದ್, ಬಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಶೃಂಗೇರಿ ಜಿಲ್ಲೆ ಕಳಸ ಪ್ರಖಂಡ ಇವರ ವತಿಯಿಂದ ಷಷ್ಠಿಪೂರ್ತಿ ಸಂಭ್ರಮ ಸೆ 1ರಂದು ಮಧ್ಯಾಹ್ನ 2ರಿಂದ ಸಂಜೆ ಗಂಟೆ 5ರ ವರೆಗೆ ಕಳಸದಲ್ಲಿ ನಡೆಯಲಿದೆ.
ವಿಶ್ವ ಹಿಂದೂ ಪರಿಷದ್ ಸ್ಥಾಪನೆ ದಿನ ಹಾಗೂ *ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮದ* ಪ್ರಯುಕ್ತ ಕೃಷ್ಣ ವೇಷದಾರಿ ಮಕ್ಕಳಿಂದ ಸಂಕೀರ್ಣ ಯಾತ್ರೆ ಮತ್ತು ಶ್ರೀ ವಿದ್ಯಾ ಗಣಪತಿ ಕುಣಿತ ಭಜನೆ ಮಂಡಳಿ ಕೋಟೆಮಕ್ಕಿ ಇವರಿಂದ ಕುಣಿತ ಭಜನೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮದ್ಯಾಹ್ನ 2 ಗಂಟೆಗೆ ಹೊರಟು ಕಲಶೇಶ್ವರ ದೇವಸ್ಥಾನದವೆರೆಗೆ ಹೋಗಿ ನಂತರ ಸಮಾರೋಪ ಸಮಾರಂಭ ಗಿರಿಜಾಂಬ ದೇವಸ್ಥಾನ ಮುಂಭಾಗದ ರಂಗಮಂದಿರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ್ಯ ದುರ್ಗಾವಾಹಿನಿಯ ಸಹ ಸಂಯೋಜಕಿ ಕು|| ಪಾರ್ವತಿ ಪ್ರಮುಖ ಬಾಷಣಕಾರರಾಗಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸ ಬೇಕಾಗಿ ಭಜರಂಗದಳದ ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್ ತಿಳಿಸಿದ್ದಾರೆ.
Related Stories
September 18, 2024