ಕಳಸ ಲೈವ್ ವರದಿ
ಕಳಸ ಪಟ್ಟಣದ ಅರಮನೆಮಕ್ಕಿ ಮೈದಾನದಲ್ಲಿ ಅದ್ದೂರಿಯ ಪ್ರಥಮ ವರ್ಷದ ಸಾರ್ವಜನಿಕ ಸೌಹಾರ್ದ ಶ್ರೀ ಗಣೇಶೋತ್ಸವ ಭರದ ಸಿದ್ಧತೆಗಳು ನಡೆಯುತ್ತಿದ್ದು, ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಈಗಾಗಲೇ ಅರಮನೆ ಮಕ್ಕಿ ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣವಾಗಿದ್ದು, ಸುಸಜ್ಜಿತ ಶಾಶ್ವತ ವೇದಿಕೆಯ ಕೆಲಸಗಳು ಭರದಿಂದ ಸಾಗುತ್ತಿದೆ. ಒಂಬತ್ತು ದಿನಗಳ ಕಾಲ ಇಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು ಪ್ರತೀ ದಿನ ಅನ್ನದಾನ ಸೇವೆಯು ನಡೆಯಲಿದೆ. ಆಟೋಟ ಸ್ಪರ್ಧೆಗಳು, ಸತ್ಯನಾರಾಯಣ ಪೂಜೆ ಚರ್ತುದ್ರವ್ಯ ಶ್ರೀ ಮಹಾಗಣಪತಿ ಹೋಮ, ರಂಗಪೂಜೆಗಳು ವಿಶೇಷವಾಗಿ ನಡೆಯಲಿದೆ.
ದಿನಾಂಕ:07-09-2024ನೇ ಶನಿವಾರ ಚತುರ್ಥಿ ಪ್ರಾತ: ಕಾಲ 8.13ಕ್ಕೆ ಸಲ್ಲುವ ಕನ್ಯಾ ಲಗ್ನ ಶುಭಾಂಶದಲ್ಲಿ ಸೌಹಾರ್ದ ಶ್ರೀ ಮಹಾಗಣಪತಿ ಪ್ರತಿಷ್ಠಾಪಣೆ, ರಾತ್ರಿ 7-00 ರಿಂದ ಸಾಂಸ್ಕøತಿಕ ಕಾರ್ಯಕ್ರಮ “ರಿಯಾ ಮ್ಯೂಜಿಕಲ್ ಪುತ್ತೂರು ಇವರಿಂದ ಸಂಗೀತಾ ರಸಸಂಜೆ”
ದಿನಾಂಕ; 08-09-2024ನೇ ಭಾನುವಾರ ರಾತ್ರಿ 7-00 ರಿಂದ ಸಾಂಸ್ಕøತಿಕ ಕಾರ್ಯಕ್ರಮ: ಸುದೇಶ್ ಜೈನ್ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮ
ದಿನಾಂಕ; 09-09-2024ನೇ ಸೋಮವಾರ ರಾತ್ರಿ 7-00ರಿಂದ ಸಾಂಸ್ಕøತಿಕ ಕಾರ್ಯಕ್ರಮ: ಅಂದ ಕಲಾವಿದರು ಶೃಂಗೇರಿ ಇವರಿಂದ ಸಂಗೀತ ರಸಸಂಜೆ, ಮತ್ತು ಕಳಸ ಕೆಪಿಎಸ್ ಪ್ರೌಢ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ
ದಿನಾಂಕ:10-09-2024ನೇ ಮಂಗಳವಾರ ರಾತ್ರಿ 7-00ರಿಂದ ಸಾಂಸ್ಕøತಿಕ ಕಾರ್ಯಕ್ರಮ: ಜಗದೀಶ್ ಆಚಾರ್ಯ ಪುತ್ತೂರು ಇವರಿಂದ ಸಂಗೀತ ಗಾನ ಸಂಭ್ರಮ
ದಿನಾಂಕ: 11-09-2024ನೇ ಬುಧವಾರ ಬೆಳಿಗ್ಗೆ 10-00 ಗಂಟೆಗೆ ಸತ್ಯನಾರಾಯಣ ಪೂಜೆ, ರಾತ್ರಿ 7-00 ರಿಂದ ಸಾಂಸ್ಕøತಿಕ ಕಾರ್ಯಕ್ರಮ: ದಿನೇಶ್ ಕೊಡಪದವು ಸಾರಥ್ಯದಲ್ಲಿ “ಯಕ್ಷತೆಲಿಕೆ”
12-09-2024ನೆ ಗುರುವಾರ ಬೆಳಿಗ್ಗೆ ಗಂಟೆ 10-00ರಿಂದ ಪುರುಷರಿಗೆ ವಾಲಿಬಾಲ್ ಪಂದ್ಯಾಟ, ರಾತ್ರಿ 7-00 ರಿಂದ ಸಾಂಸ್ಕøತಿಕ ಕಾರ್ಯಕ್ರಮ: ಶಾರದಾ ಆಟ್ರ್ಸ್ ಕಲಾವಿದರು(ರಿ) ಮಂಗಳೂರು ಇವರಿಂದ ಕಾಂತರ ಸಿನಿಮಾ ಖ್ಯಾತಿಯ ಪ್ರಕಾಶ್ ಕೆ ತೂಮಿನಾಡು ಅಭಿನಯದ, ಜೆ.ಇ. ತೂಮಿನಾಡು ನಿರ್ದೇಶನದ “ಕಥೆ ಎಡ್ಡೆ ಉಂಡು” ತುಳು ಹಾಸ್ಯಮಯ ನಾಟಕ
ದಿನಾಂಕ: 13-09-2024ನೇ ಶುಕ್ರವಾರ ಬೆಳಿಗ್ಗೆ 9-00 ಗಂಟೆಗೆ ಚರ್ತುದ್ರವ್ಯ ಶ್ರೀ ಮಹಾಗಣಪತಿ ಹೋಮ, ರಾತ್ರಿ 7-ರಿಂದ ಸಾಂಸ್ಕøತಿಕ ಕಾರ್ಯಕ್ರಮ: ಸುವರ್ಣ ಕರ್ನಾಟಕ ಜಿಲ್ಲಾ ಪ್ರಶಸ್ತಿ ಪುರಸ್ಕøತ ಕನ್ನಡ ತುಳು ಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಮತ್ತು ಬಳಗ ಮಂಗಳೂರು ಇವರಿಂದ “ರಾಗ್ ರಂಗ್ ಸಂಗೀತಾ ರಸ ಮಂಜರಿ” ಕಾರ್ಯಕ್ರಮ
ದಿನಾಂಕ: 14-09-2024ನೇ ಶನಿವಾರ ಬೆಳಿಗ್ಗೆ ಗಂಟೆ 10-00ರಿಂದ ಮಹಿಳೆಯರು ಹಾಗೂ ಪುರುಷರಿಗೆ ಆಟೋಟ ಸ್ಪರ್ಧೆ
ಸಂಜೆ 6-00 ಗಂಟೆಗೆ ಧಾರ್ಮಿಕ ಸಭೆ, ರಾತ್ರಿ 7-00 ರಿಂದ ವಿಜಯ ಕುಮಾರ್ ಕೋಡಿಯಲ್ ಬೈಲ್ ಮಂಗಳೂರು ನಿರ್ಧೇಶನದ “ಶಿವದೂತೆ ಗುಳಿಗೆ” ಕನ್ನಡ ನಾಟಕ
ದಿನಾಂಕ: 15-09-2024ನೇ ಭಾನುವಾರ ಬೆಳಿಗ್ಗೆ 10-30ರಿಂದ ಸ್ಟಾರ್ ನೈಟ್ ಮಂಗಳೂರು ಮತ್ತು ಜೀ ಕನ್ನಡ ಸರಿಗಮಪ ಖ್ಯಾತಿಯ ಕಲಾವಿಧರಿಂದ ಇವರಿಂದ “ಸಂಗೀತ ರಸಮಂಜರಿ” ಮದ್ಯಾಹ್ನ: 4-00ಕ್ಕೆ ಲಕ್ಕಿಡಿಪ್ ಡ್ರಾ
ಸಂಜೆ 4-30ಕ್ಕೆ ಶ್ರೀ ಸ್ವಾಮಿಯ ವೈಭವಯುತ ಶೋಭಯಾತ್ರೆಯು ಕಳಸದ ರಾಜಬೀದಿಯಲ್ಲಿ ಸಾಗಿ ಕೋಟೆಹೊಳೆಯ ಕೋಟಿತೀರ್ಥದಲ್ಲಿ ಜಲಸ್ಥಂಭನ
ಮೆರವಣಿಗೆಯ ವಿಶೇಷ ಆಕರ್ಷಣೆ
ಮಂಗಳೂರಿನ ಹೆಸರಾಂತ ಹುಲಿ ಕುಣಿತ, ಸಿಡಿ ಮದ್ದು ಪ್ರದರ್ಶನ, ಬೆಳ್ತಂಗಡಿ ಪಪ್ಪು ಸೌಂಡ್ಸ್ ಎಂಡ್ ಲೈಟ್ಸ್ ತಂಡದವರಿಂದ ಡಿ.ಜೆ, ಮಹಾಲಕ್ಷ್ಮೀ ಕೀಲುಕುದುರೆ ತಂಡ ಕಡಾರಿ ಬಜಗೋಳಿ ಇವರಿಂದ ಗೊಂಬೆ ಕುಣಿತ, ರಂಜು ಪರ್ಕಳ ಇವರಿಂದ ವಿಭಿನ್ನ ಶೈಲಿಯ ವಿಶೇಷ ಆಕರ್ಷನೆಯ ಆಂಜನೇಯ ಮತ್ತು ಘಟೋದ್ಗಜ ವೇಷಗಳು ಇರಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ವಿ.ರವಿ ರೈ ಮತ್ತು ಪ್ರಧಾನ ಕಾರ್ಯದರ್ಶಿ ಬ್ರಹ್ಮದೇವ ತಿಳಿಸಿದ್ದಾರೆ.
Related Stories
September 18, 2024