
ಕಳಸ ಲೈವ್ ವರದಿ
ಪ್ರತೀ ದಿನ ಸುರಿಯುತ್ತಿರುವ ಮಳೆ ಕಡಿಮೆಯಾಗಲೆಂದು ಕಲಶೇಶ್ವರ ಹಾಗೂ ಪರಿವಾರ ದೇವರುಗಳಲ್ಲಿ ಅಕ್ಟೋಬರ್ 28 ರಂದು ಪ್ರಾರ್ಥನೆ ಮಾಡಲು ತೀರ್ಮಾನಿಸಲಾಗಿದೆ.
ಕಳಸ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅತಿವೃಷ್ಟಿಯ ಕಾರಣದಿಂದ ಜನಸಾಮಾನ್ಯರಿಗೆ, ರೈತರಿಗೆ,ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಜಾನುವಾರುಗಳಿಗೆ ದೈನಂದಿನ ಬದುಕು ಕಷ್ಟಕರವಾಗಿದೆ.ಈ ಹಿನ್ನಲೆಯಲ್ಲಿ ದಿನಾಂಕ :28/10/2024 ರಂದು ಸೋಮವಾರ ಮಹಾಮಂಗಳಾರತಿಗೂ ಮೊದಲು ಶ್ರೀ ಕಲಶೇಶ್ವರ ಸ್ವಾಮಿ ಮತ್ತು ಪರಿವಾರ ದೇವರುಗಳಲ್ಲಿ ಮಳೆ ಕಡಿಮೆಯಾಗುವಂತೆ ಪ್ರಾರ್ಥಿಸಲು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಸೂಚನೆಯಂತೆ ತೀರ್ಮಾನಿಸಲಾಗಿರುತ್ತದೆ.
ಸದರಿ ದಿನಾಂಕದಂದು ಊರಿನ ಸಮಸ್ತ ಭಕ್ತಾದಿಗಳು ಮತ್ತು ರೈತ ಬಾಂಧವರು ಈ ಪ್ರಾರ್ಥನೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ.