
oplus_262144

ಕಳಸ ಲೈವ್ ವರದಿ
ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಅಂಗವಾಗಿ ವೃದ್ಧ ಮಹಿಳೆಯರಿಗೆ ಸೀರೆ ಹಂಚುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನಪೂಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯ ಸದಾನಂದ ವಹಿಸಿ, ಕಳೆದ ಮೂವತ್ತು ವರ್ಷಗಳಿಂದ ನಮ್ಮ ಮಂಡಳಿಯ ಹಿರಿಯರು ಗಾಂಧಿ ಜಯಂತಿ ದಿನದ ಅಂಗವಾಗಿ ವೃದ್ಧ ಮಹಿಳೆಯರಿಗೆ ಸೀರೆ ಕೊಡುವ ಆಚರಣೆ ನಡೆಸಿಕೊಂಡು ಬಂದಿದ್ದಾರೆ ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.ಮುಂದಿನ ಪೀಳಿಗೆಯು ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಉಧ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಮಾತನಾಡಿ ಗಾಂಧಿಜಿಯ ತತ್ವವನ್ನು ಮಹಿಳಾ ಮಂಡಳಿಯ ಸದಸ್ಯರು ಆಚರಿಸಿಕೊಂಡು ಹೋಗುತ್ತಿದ್ದಾರೆ.ಇಂತಹ ಸೇವಾ ಕಾರ್ಯಗಳಿಂದ ಆತ್ಮ ತೃಪ್ತಿಯನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೃದ್ಧ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. 125ಕ್ಕೂ ಹೆಚ್ಚು ವೃದ್ಧ ಮಹಿಳೆಯರಿಗೆ ಸೀರೆಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಂಡಳಿ ಸ್ಥಾಪಕರಾದ ಚಂಪಾ ಎಂ ರಾವ್, ಕಳಸ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಗಿರೀಶ್, ಮಂಡಳಿಯ ಸದಸ್ಯರಾದ ಪಾತಿಮಾ ರೆಹಮಾನ್, ಅಮಿತ ವಿನಾಯಕ, ಕಲ್ಪನಾ ಅಜಿತ್, ಆಶಾ ಗುರುರಾಜ್, ಶೋಭಾ ದೇಸಾಯಿ ಇತರರು ಇದ್ದರು.