ಕಳಸ ಲೈವ್ ವರದಿ
ಕಳಸ ತಾಲೂಕಿನ ಎಸ್.ಕೆ. ಮೇಗಲ್ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಳಸ ವಲಯದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು.
ಶ್ರೀ ವಿದ್ಯಾಗಣಪತಿ ಸಭಾ ಭವನದಲ್ಲಿ ಸುಬ್ರಹ್ಮಣ್ಯ ಭಟ್ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ಬಿ. ಶ್ರೀಪಾಲಯ್ಯ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲಾ ್ಲನಿರ್ದೇಶಕರಾದ ಸದಾನಂದ ಬಂಗೇರ ನೆರವೇರಿಸಿದರು. ಧಾರ್ಮಿಕ ಉಪನ್ಯಾಸವನ್ನು ಸಂಸ್ಕøತ ಅಧ್ಯಾಪಕರಾದ ಶಿವರಾಮ್ ಹೆಚ್.ಕೆ ನೀಡಿದರು.
ಇದೇ ಸಂದರ್ಭದಲ್ಲಿ ಊರಿನ ಹಿರಿಯ ನಾಟಿ ವೈದ್ಯರುಗಳನ್ನು ಗೌರವಿಸಲಾಯಿತು.ಪ್ರಕೃತಿ ವಿಕೋಪದ ಪರಿಹಾರದ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದ ನಂತರ ಮಹಿಳಾ ಜ್ಞಾನವಿಕಾಸ ಸದಸ್ಯರು ಹಾಗೂ ಒಕ್ಕೂಟದ ಸದಸ್ಯರಿಂದ ವಿವಿದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಜೆ. ಸುದರ್ಶನ್ ಶೆಟ್ಟಿ ಚಾವಡಿ ಮನೆ ಸಂಸೆ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕೀರ್ತಿ ಜೈನ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಸುಜಯಾ ಸದಾನಂದ, ಶ್ರೀ ಬಾಲ ಗಣಪತಿ ಸೇವಾ ಸಮಿತಿ ಎಸ್.ಕೆ ಮೇಗಲ್ ಅಧ್ಯಕ್ಷ ಸತೀಶ್ ಯಂ. ವಿ. ಸಂಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ಮಮತಾ, ಯೋಜನಾಧಿಕಾರಿ ಸುರೇಶ್, ಕಳಸ ತಾಲೂಕು ಶೌರ್ಯ ವಿಪತ್ತು ಘಟಕದ ಮಾಸ್ಟರ್ ಬಿ.ಕೆ. ಮಹೇಶ್, ಪ್ರಗತಿ ಬಂದು ಒಕ್ಕೂಟ ಎಸ್.ಕೆ.ಮೇಗಲ್ ಅಧ್ಯಕ್ಷ ಮಂಜುನಾಥ್ ಕೆ.ಎಸ್. ಶೌರ್ಯ ವಿಪತ್ತು ಘಟಕ ಕಳಸ ತಾಲೂಕು ಕ್ಯಾಪ್ಟನ್ ಅಜಿತ್ ಕುಲಾಲ್ ಹಾಗೂ ಸಂಘದ ಸದಸ್ಯರು, ವಿಪತ್ತು ಸ್ವಯಂ ಸೇವಕರು, ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.