ಕಳಸ ಲೈವ್ ವರದಿ
ಶ್ರೀಕ್ಷೇತ್ರ ಹೊರನಾಡಿನಲ್ಲಿ ಜಗನ್ಮಾತೆ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿಯ ರಥೋತ್ಸವದ ಸಂಭ್ರಮ ಮನೆಮಾಡಿದೆ. ಫೆಬ್ರವರಿ 18ರಿಂದ ಫೆಬ್ರವರಿ 22ರವರೆಗೆ ವಿಜೃಂಭಣೆಯಿAದ ನಡೆಯಲಿರುವ ಈ ವಾರ್ಷಿಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕ್ಷೇತ್ರದ ಧರ್ಮಕರ್ತರಾದ ಡಾ. ಜಿ. ಭೀಮೇಶ್ವರ ಜೋಷಿ ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ಕಾರ್ಯಕ್ರಮಗಳು ಜರುಗಲಿವೆ.
ಫೆ. 18ರ ಬುಧವಾರ ಗಣಪತಿ ಪೂಜೆ ಹಾಗೂ ಮಹಾಗಣಪತಿ ಹೋಮದೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ಅಂದು ರಾತ್ರಿ ದೇವಸ್ಥಾನದಲ್ಲಿ ‘ಮಹಾರಂಗಪೂಜೆ’ ನೆರವೇರಲಿದೆ.
ಫೆ. 19ರ ಗುರುವಾರ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಲಿದ್ದು, ರಾತ್ರಿ ವಿಶೇಷ ‘ಪುಷ್ಪಕಾರೋಹಣ’ದ ಮೆರುಗು ಇರಲಿದೆ.
ಫೆಬ್ರವರಿ 20ರ ಶುಕ್ರವಾರದಂದು ಉತ್ಸವದ ಪ್ರಮುಖ ಆಕರ್ಷಣೆಯಾದ ‘ಶ್ರೀ ಬ್ರಹ್ಮರಥೋತ್ಸವ’ ಮಧ್ಯಾಹ್ನ 12:32ಕ್ಕೆ ಜರುಗಲಿದೆ. ಅದೇ ದಿನ ರಾತ್ರಿ 10 ಗಂಟೆಗೆ ದೀಪಾಲಂಕಾರಗಳ ನಡುವೆ ‘ಶ್ರೀಮನ್ ಮಹಾರಥೋತ್ಸವ’ ನಡೆಯಲಿದ್ದು, ಭಕ್ತಸಾಗರವೇ ಹರಿದುಬರುವ ನಿರೀಕ್ಷೆಯಿದೆ.
ಫೆ. 21ರಂದು ಕುಂಕುಮೋತ್ಸವ, ಪವಿತ್ರ ಅವಭೃತ ಸ್ನಾನ ಹಾಗೂ ರಾತ್ರಿ ಶ್ರದ್ಧಾಭಕ್ತಿಯ ‘ಇಡಿಗಾಯಿ ಸೇವೆ’ ನಡೆಯಲಿದೆ. ಫೆಬ್ರವರಿ 22ರ ಭಾನುವಾರ ಸಂಪ್ರೋಕ್ಷಣೆಯೊAದಿಗೆ ಈ ಸಾಲಿನ ರಥೋತ್ಸವದ ಧಾರ್ಮಿಕ ವಿಧಿಗಳು ಮಂಗಲಗೊಳ್ಳಲಿವೆ.
