ಕಳಸ ಲೈವ್ ವರದಿ
ಇಲ್ಲಿಯ ಗೊರಸುಕುಡಿಯ ನಿವಾಸಿ, ಕಳಸ ಮಂಡಲ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ತೋಟದೂರು ಗ್ರಾಮ ಪಂಚಾಯಿತಿಯಲ್ಲಿ ಮೂರು ಬಾರಿ ಸದಸ್ಯೆಯಾಗಿದ್ದ ಶ್ರೀಮತಿ ಶೇಷಮ್ಮ (76) ಅವರು ಜನವರಿ 31ರಂದು ನಿಧನರಾದರು.
ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ಶೇಷಮ್ಮ ಅವರು ಕಳಸ ಮಂಡಲ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ತೋಟದೂರು ಗ್ರಾಮ ಪಂಚಾಯಿತಿಯಲ್ಲಿ ಮೂರು ಅವಧಿಗಳ ಕಾಲ ಸದಸ್ಯೆಯಾಗಿದ್ದರು. ಜೊತೆಗೆ ತಲಗೋಡು ನಿವೇದಿತಾ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿ ಮೂರು ವರ್ಷಗಳ ಕಾಲ ಮಹಿಳಾ ಸಂಘಟನೆಗೆ ಮುನ್ನಡೆ ನೀಡಿದ್ದರು.
ಯಕ್ಷಗಾನ ಕಲಾಭಿಮಾನಿಯಾಗಿದ್ದ ಶೇಷಮ್ಮ ಅವರು ಶ್ರೀ ಕಾಳಿಂಗ ನಾವುಡ ಪ್ರತಿಷ್ಠಾನದ ಪೋಷಕರಾಗಿಯೂ ಗುರುತಿಸಿಕೊಂಡಿದ್ದರು. ಇವರು ಗೊರಸುಕುಡಿಯ ಜಿ.ಎಸ್. ಭಾಸ್ಕರ್ರಾವ್ ಅವರ ಪತ್ನಿಯಾಗಿದ್ದು, ಪತಿ ಅನಾರೋಗ್ಯದ ಹಿನ್ನೆಲೆ ಕಳಸದಲ್ಲಿ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ಭಾಸ್ಕರ್ರಾವ್ ಅವರು ನಿಧನರಾಗಿದ್ದರು.
ಮೃತರು ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ
