ಕಳಸ ಲೈವ್ ವರದಿ
ಕನ್ನಡ ರಾಜ್ಯೋತ್ಸವ ನುಡಿ ನಿತ್ಯೋತ್ಸವ ಕಾರ್ಯಕ್ರಮಗಳು ಕೇವಲ ವೇದಿಕೆ ಕಾರ್ಯಕ್ರಮವಾಗಿರದೆ ತೆರೆಮರೆಯಲ್ಲಿರುವ ಬರಹಗಾರರನ್ನು ಮತ್ತು ಪ್ರತಿಭೆಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಕೆಲಸಗಳು ನಡೆಯಬೇಕು ಎಂದು ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ ಹೇಳಿದರು.
ಕಳಸ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳಸ ಮಹಿಳಾ ಘಟಕದಿಂದ ಮಹಿಳೆಯರಿಗೆ ಪ್ರಬಂದ ಸ್ಪರ್ಧೆ, ಆಶು ಭಾಷಣ ಸ್ಪರ್ಧೆಗಳನ್ನು ನಡೆಸುವ ಮುಖಾಂತರ ಮಹಿಳೆಯರ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸಲಾಗುತ್ತಿದೆ.ಅಲ್ಲದೆ ಮಹಿಳೆಯರು ಸಕ್ರೀಯವಾಗಿ ಸಾಹಿತ್ಯ ಕಾರ್ಯಕ್ರಮದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸಾಕಷ್ಟು ಮಹಿಳಾ ಸದಸ್ಯರು ಯಾವುದೇ ಅಂಚಿಕೆ ಇಲ್ಲದೆ ವೇದಿಕೆಯಲ್ಲಿ ನಿಂತು ಮಾತನಾಡುವ, ಕವನ ವಾಚನ ಮಾಡುವ, ಕಥೆ, ಚುಟುಕು, ಬರಹಗಳನ್ನು ಬರೆಯುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕಳಸ ತಾಲ್ಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ ಕಳಸದಲ್ಲಿ ಪುರುಷರಿಗಿಂತ ಮಹಿಳಾ ಸಾಹಿತ್ಯಾಸಾಕ್ತರು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಮಹಿಳೆಯರಿಗೆ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಬಂದಾಗ ತಮ್ಮ ಮನೆಯಲ್ಲಿ ಮಕ್ಕಳಿಗೂ ಕೂಡ ಸಾಹಿತ್ಯದ ಆಸಕ್ತಿ ಹೆಚ್ಚಾಗಲು ಕಾರಣವಾಗುತ್ತದೆ.ಮುಂದಿನ ದಿನಗಳಲ್ಲಿ ಕಳಸದಲ್ಲಿ ಹೋಬಳಿ ಮತ್ತು ತಾಲ್ಲೂಕು ಸಮ್ಮೇಳನ ನಡೆಸುವ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆಯನ್ನು ಡಾ. ಜಾನಕಿ ಸುಂದರೇಶ್ ರವರು ನಡೆಸಿ ಬಹುಮಾನಗಳನ್ನು ನೀಡಿದರು.
ಸಾಹಿತಿ ಗೀತಾ ಮಕ್ಕಿಮನೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಷಾ ವಿಶ್ವನಾಥ್, ಪ್ರೇಮ್ ಕುಮಾರ್, ಚಂಪಕಾ ರಾಘವೇಂದ್ರ, ಕಜಾಪ ಅಧ್ಯಕ್ಷರಾದ ಅಜಿತ್ ಪ್ರಸಾದ್, ಪೂರ್ಣಚಂದ್ರ, ಫಾತಿಮಾ ರೆಹಮಾನ್. ಕಲ್ಪನಾ ಅಜಿತ್, ಲೀಲಾ ಶ್ರೀಕಾಂತ್, ರೂಪಾ ಪಿಂಟೋ, ಮೋಳಿ ಜೇಮ್ಸ್, ಪ್ರೇಮಾ ರಾಜು, ವೀಣಾ ಮುರುಗೇಶ್ ಇತರರು ಇದ್ದರು.