
ಕಳಸ ಲೈವ್ ವರದಿ
ಕಳಸ ತಾಲ್ಲೂಕು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘ ವತಿಯಿಂದ ಸೋಮವಾರ ನಿಧನರಾದ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್. ರಾಜು ರವರ ಆತ್ಮಕ್ಕೆ ಸದ್ಗತಿ ಕೋರಿ ಶ್ರದಾಂಜಲಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಳಸ ಬಿಲ್ಲವ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ ಮಾತನಾಡಿ ಡಿ.ಆರ್.ರಾಜು ನೇರ ನಡೆನುಡಿಯ ಅಜಾತಶತ್ರು. ಕಳಸ ಬಿಲ್ಲವ ಸಂಘದಲ್ಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನ ಸುದೀರ್ಘ ಸೇವೆಯನ್ನು ಮುಡಿಪಾಗಿಟ್ಟ ಡಿ.ಆರ್ ರಾಜು ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ಸಾರ್ವಜನಿಕ ಸೇವೆಯಲ್ಲಿ ಅವರ ಸುದೀರ್ಘ ಸೇವೆ ಮತ್ತು ಬಡವರನ್ನು ಸಬಲೀಕರಣದಗೊಳಿಸುವ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಪ್ರಮುಖರಾದ ಎಂ.ಎ. ಶೇಷಗಿರಿ, ಚಂದ್ರಶೇಖರ, ಪೂರ್ಣಿಮಾ, ರಾಜು, ಬೇಬಿ ಹಿರೇಬೈಲ್, ಗುರುವಪ್ಪ, ರಾಜೇಂದ್ರ ಇತರರು ಇದ್ದರು.


