ಕಳಸ ಲೈವ್ ವರದಿ
ಸಾಮಾಜಿಕ ಜಾಲತಾಣ ಫೇಸ್ಟುಕ್ನಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಹಾಗೂ ದೇವಸ್ಥಾನದ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಭಕ್ತರು ಒತ್ತಾಯಿಸಿ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಿಂದೂ ದೇವಾಲಯಗಳ ಬಗ್ಗೆ ಅಂಜುಮ್ ಶೇಖ್ ಹೆಸರಿನಲ್ಲಿ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಇದು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಗಂಭೀರ ಅಪರಾಧವಾಗಿರುತ್ತದೆ. ಫೆಸ್ಟುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಅಶ್ಲೀಲ ಮತ್ತು ಅಸಹ್ಯಕರ ಸಂದೇಶವನ್ನು ನಕಲಿ ಖಾತೆ ಸೃಷ್ಟಿಸಿ ಮಾಡಲಾಗಿದೆಯೇ ಅಥವಾ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಿ, ಇಂತಹ ನೀಚ ಕೆಲಸ ಮಾಡಿರುವ ವ್ಯಕ್ತಿಯೂ ಯಾವುದೇ ಧರ್ಮಕ್ಕೆ ಸೇರಿದವನಾಗಿದ್ದರೂ ಸರಿ ಅಂತಹವರನ್ನು ಕಂಡು ಹಿಡಿದು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಭಕ್ತರಾದ ಅಜಿತ್, ಸತೀಶ್, ಗಣೇಶ್, ಹರ್ಷೇಂದ್ರ ಜೈನ್, ಸತ್ಯೇಂದ್ರ ಜೈನ್ , ನಾಗ್ಕುಮಾರ್, ಸಂತೋಷ್, ಸುಬ್ರಹ್ಮಣ್ಯ ಭಟ್, ಶ್ರೇಣಿಕ್, ಮಹವೀರ, ಪ್ರಜ್ವಲ್ ಜೈನ್, ದನುಷ್ ಇತರರು ಇದ್ದರು.