ಕಳಸ ಲೈವ್ ವರದಿ
ಕಳಸ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ವತಿಯಿಂದ ಶುಕ್ರವಾರ ಮಕ್ಕಳ ದಿನಾಚರಣೆಯನ್ನು ನಡೆಸಲಾಯಿತು.
ಕಳಸ ಪಟ್ಟಣದ ಪ್ರಬೋಧಿನಿ ವಿದ್ಯಾಕೇಂದ್ರ, ಜೆಇಎಂ ಆಂಗ್ಲ ಮಾಧ್ಯಮ ಹಾಗೂ ಕೆಪಿಎಸ್ ಶಾಲಾ ವಿದ್ಯಾಥಿಗಳು ಮಕ್ಕಳು ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಂಡಳಿಯ ಸದಸ್ಯೆಯರು ವಿದ್ಯಾರ್ಥಿಗಳಿಗೆ ಹೂ, ಸಿಹಿ ಕೊಟ್ಟು ಸಭಾಂಗಣದ ಒಳಗೆ ಬರ ಮಾಡಿಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳ ಕೈಯಿಂದ ಮಾಡಿಸಲಾಯಿತು. ವೇದಿಕೆಯಲ್ಲೂ ವಿದ್ಯಾರ್ಥಿಗಳು ಅತಿಥಿ ಸ್ಥಾನವನ್ನು ಅಲಂಕರಿಸಿದರು.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನೀಯರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳನ್ನು ಮಂಡಳಿಯ ಸದಸ್ಯರಾದ ನಿಕಿತಾ, ಪೂರ್ಣಿಮಾ, ಆಶಾ, ನಂದಿನಿ ನಡೆಸಿಕೊಟ್ಟರು.ಕಾರ್ಯಕ್ರಮದ ಪ್ರಾರಂಭವನ್ನು ಪ್ರಾರ್ಥನೆಯ ಮುಖಾಂತರ ಸುಚಿತಾ ಉದಯ್ ನಡೆಸಿಕೊಟ್ಟರು.ಭಾಗವಹಿಸಿದ ಎಲ್ಲರನ್ನು ಅಮಿತ ವಿನಾಯಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾದ ನಿರೂಪಣೆಯನ್ನು ಗೀತಾ ಮಕ್ಕಿಮನೆ ಮಾಡಿದರು. ಅಮಿತಾ ವಿನಾಯಕ ಮಕ್ಕಳಿಗಾಗಿ ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಕಳಸ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ನಿವೇದಿತಾ ಎಸ್ ಮುಖ್ಯ ಅತಿಥಿಯಾಗಿ ಶಾಲೆ ಅನ್ನುವುದು ಜಾತಿ, ಧರ್ಮವನ್ನು ತಿಳಿಸುವುದಿಲ್ಲ ಅದನ್ನು ಮೀರಿ ಒಳ್ಳೆಯ ಮನಸ್ಸನ್ನು ಒಟ್ಟುಗೂಡಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಯ ಸದಾನಂದ ವಹಿಸಿಕೊಂಡು ಮಕ್ಕಳೆಂದರೆ ನಮ್ಮ ಆಸ್ತಿ. ಈ ಆಸ್ತಿಯನ್ನು ಜೋಪಾನ ಮಾಡುವ ಕರ್ತವ್ಯ ನಮ್ಮಂತ ಹಿರಿಯರ ಮೇಲಿದೆ.ಮಕ್ಕಳನ್ನು ಶೈಕ್ಷಣಿಕವಾಗಿ, ಸಂಸ್ಕಾರಯುತವಾಗಿ, ಸಾಮಾಜಿಕವಾಗಿ ಬೆಳೆಸುವಂತ ದೊಡ್ಡ ಹೊಣೆಗಾರಿಗೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಳಿಯ ನಿರ್ದೇಶಕಿ ಮನೋರಾಧಿನಿ ಧರಣೇಂದ್ರ, ಮಂಡಳಿಯ ಸದಸ್ಯರಾದ ಕಲ್ಪನಾ ಅಜಿತ್, ಶೋಭಾ ದೇಸಾಯಿ, ಆಶಾ ಗುರುರಾಜ್, ಉಷಾ ಕುಮಾರ್, ಶುಭ, ಶಾಲಿನಿ ವಿಜಯ್, ಮೇನಕ, ಅಕ್ಷತಾ, ಜಮೀಳಾ ರಫೀಕ್ ಇತರರು ಇದ್ದರು.