ಕಳಸ ಲೈವ್ ವರದಿ
ಡಾ|| ರಾಜ್ ಕನ್ನಡ ಸಂಘ,ಕಳಸ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ), ಕಳಸ ಇವರ ವತಿಯಿಂದ 33ನೇ ವರ್ಷದ ಕನ್ನಡ ರಾಜ್ಯೋತ್ಸವ ಇದೇ ತಿಂಗಳ 26ನೇ ಮಂಗಳವಾರ ಕಳಸ ದುರ್ಗಾ ಪೆಂಡಾಲ್ ನಲ್ಲಿ ನಡೆಯಲಿದೆ.
ಅಂದು ಸಂಜೆ 6.30ರಿಂದ ಕಾರ್ಯಕ್ರಮ ನಡೆಯಲಿದ್ದು,ವಿವಿಧ ಗಣ್ಯರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಹಾಗೂ ಹಿನ್ನಲೆ ಗಾಯಕರಿಗೆ ಗೌರವ ಸಮರ್ಪಣೆ ನಡೆಯಲಿದೆ.
ಸಭಾ ಕಾರ್ಯಕ್ರಮದ ನಂತರದಲ್ಲಿ ರಾಗ ಮೆಲೋಡಿಸ್ ಮಂಗಳೂರು ಇವರಿಂದ ಆರ್ಕೆಸ್ಟ್ರಾ ನಡೆಯಲಿದೆ. ಚಲನಚಿತ್ರದ ಕೆಲ ನಟ ನಟಿಯರು ಆಗಮಿಸಲಿದ್ದಾರೆ ಎಂದು ಕನ್ನಡ ರಾಜು ತಿಳಿಸಿದ್ದಾರೆ.