
ಕಳಸ ಲೈವ್ ವರದಿ
ಕಳಸ ಕಲಶೇಶ್ವರ ದೇವರ ಪರಿವಾರ ದೇವರಾದ ಕಂಚಿನಕೆರೆ ಸಮೀಪ ಇರುವ ಕಾಲಬೈರವ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಬರಿಗೈಲಿ ವಾಪಾಸಾಗಿದ್ದಾರೆ.
ಗುರುವಾರದ ತಡ ರಾತ್ರಿ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಒಳಗಡೆ ಬೆಳೆಬಾಳುವ ಸಾಮಾಗ್ರಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ದೇವಸ್ಥಾನದ ಒಳಗೆ ಕಾಣಿಕೆ ಹುಂಡಿಯಾಗಲಿ ಯಾವುದೇ ಬಾಳೆಬಾಳುವ ಸಾಮಾಗ್ರಿಗಳು ಇಲ್ಲದೆ ಇರುವುದರಿಂದ ಕಳ್ಳರು ಬರಿಗೈಲಿ ವಾಪಾಸಾಗಿದ್ದಾರೆ.
ಸ್ಥಳಕ್ಕೆ ಕಳಸ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.