
ಕಳಸ ಲೈವ್ ವರದಿ
ಶಾಸಕಿ ನಯನ ಮೋಟಮ್ಮ ಕಳಸ ತಾಲ್ಲೂಕಿನ ಕೆಲವೆಡೆ ವಿವಿಧ ಕಾಮಗಾರಿಗಳಿಗೆ 11-02-2025 ರಂದು ಚಾಲನೆ ನೀಡಲಿದ್ದಶರೆ.
ಕಳಸ ತಾಲ್ಲೂಕು, ಕಳಸ ಗ್ರಾ. ಪಂಚಾಯತಿ ವ್ಯಾಪ್ತಿಯ ನೆಲ್ಲಿಕೆರೆ ಅಂಗನವಾಡಿ ಕೇಂದ್ರವನ್ನು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.11.30ಗೆ ಅಣ್ಣಪ್ಪ ನಗರ ರಸ್ತೆಗೆ
10 ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ. ಮಧ್ಯಾಹ್ನ 12.00ಕ್ಕೆ ತಾಲ್ಲೂಕು ಪಂಚಾಯಿತಿಯಲ್ಲಿ ಕಳಸ ತಾಲ್ಲೂಕು ಮಟ್ಟದ ಗ್ಯಾರಂಟಿ ಕಛೇರಿ ಉದ್ಘಾಟನೆ.12.30ಕ್ಕೆ 55 ಲಕ್ಷ ಮೊತ್ತದ ಅಬ್ಬುಗುಡಿಗೆ ಸೇತುವೆ ಉದ್ಘಾಟನೆ.2.30ಕ್ಕೆ ಸಂಸೆ ಗ್ರಾ. ಪಂಚಾಯತಿ ವ್ಯಾಪ್ತಿಯ ಮಳ್ಳೋಡಿ ರಸ್ತೆಗೆ 5 ಕೋಟಿ ಮೊತ್ತದ ಕಾಮಗಾರಿಗೆ ಗುದ್ದಲಿ ಪೂಜೆ.3.30ಕ್ಕೆ ಕೊಟ್ಟಿಗೆಹಾರ-ಕಳಸ ರಸ್ತೆಯಿಂದ ಮರಸಣಿಗೆ ಗಾಳಿಗಂಡಿ ತೊಡ್ಡು ಮಾರ್ಗವಾಗಿ ಕುದುರೆಮುಖ-ಕಳಸ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ 2 ಕೋಟಿ ಮೊತ್ತದ ಅಭಿವೃದ್ಧಿಗೆ ಚಾಲನೆ.4.30 ಕ್ಕೆ ಹಿರೇಬೈಲು ಮಲ್ಲೇಶನಗುಡ್ಡ ಬಾಳೆಹೊಳೆ ರಸ್ತೆಯಿಂದ ನಾಗಮಕ್ಕಿ ಮೂಲಕ ಮರಸಣಿಗೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ 2 ಕೋಟಿ ವೆಚ್ಚದಲ್ಲು ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ.