ಕಳಸ ಲೈವ್ ವರದಿ
ಕಳಸ ಸರ್ಕಾರಿ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸುವಂತೆ ಡಾ.ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ್ ಶೆಟ್ಟಿ ಬಳಗ)ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ನೀಡಿದ ಭರವಸೆಗೆ ಕೈಬಿಡಲಾಗಿದೆ.
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಇರುವುದರಿಂದ ಶ್ರೀಘ್ರವಾಗಿ ಖಾಯಂ ವೈದ್ಯರನ್ನು ನೇಮಿಸುವಂತೆ ಇದೇ ತಿಂಗಳ 15ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿತ್ತು.ಈ ಬಗ್ಗೆ ಡಾ.ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ್ ಶೆಟ್ಟಿ ಬಳಗ)ಕಳಸ ಇದರ ಅಧ್ಯಕ್ಷರು ಮತ್ತು ಸದಸ್ಯರು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರನ್ನು ಬೇಟಿ ಕಳಸ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಆಗುವ ತೊಂದರೆಗಳ ಬಗ್ಗೆ ಸಚಿವರ ಗಮನಕ್ಕೆ ತಂದು ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಪ್ರತಿಕ್ರೀಯೆ ನೀಡಿದ ಸಚಿವರು ಉಪವಾಸ ಕೂರುವ ಅಗತ್ಯ ಇಲ್ಲ.ಈ ಬಗ್ಗೆ ಕೂಡಲೇ ಸಂಬಂದಿಸಿದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡು ಕಳಸಕ್ಕೆ ಖಾಯಂ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ರಾಜ್ಯ ಜೆಡಿಎಸ್ ಮುಖಂಡ ಸುರೇಶ್ ಕುಮಾರ್, ಚಿತ್ರ ನಿರ್ಮಾಪಕ ಲಕ್ಷ್ಮಣ್ ಕುಮಾರ್, ರಾಜ್ ಕನ್ನಡ ಸಂಘ ಜಿಲ್ಲಾಧ್ಯಕ್ಷ ಓಂಕಾರಪ್ಪ, ಕರವೇ ಗೌರವಾಧ್ಯಕ್ಷ ಮಲ್ನಾಡ್ ಶರೀಫ್ ಇದ್ದರು.
