ಕಳಸ ಲೈವ್ ವರದಿ
ಕರ್ನಾಟಕ ಜಾನಪದ ಪರಿಷತ್ ಕಳಸ ಘಟಕ ವತಿಯಿಂದ ಕುದುರೆಮುಖದ ವಿನೋಬನಗರದಲ್ಲಿ ಮಲ್ನಾಡ್ ಎಮಿಗೋಸ್ ನಡೆಸುತ್ತಿರುವ ೧೫ ದಿನಗಳ ಬೇಸಿಗೆ ಶಿಬಿರದಲ್ಲಿ ಕರಟದ ಚಿಪ್ಪಿನ ಕಲೆಯ ಬಗ್ಗೆ ಮಕ್ಕಳಿಗೆ ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ಅಡುಗೆಗೆ ಬಳಸಿ ಎಸೆಯುವ ಕರಟದ ಚಿಪ್ಪಿನ ಕಲೆಯ ತಯಾರಿಗೆ ಬಗ್ಗೆ ಪ್ರಾಯೋಗಿಕವಾಗಿ ಪೂರ್ಣಚಂದ್ರ ಅವರು ಮಾಹಿತಿ ನೀಡಿದರು.
ಮಲೆನಾಡಿನ ಅಳಿದುಹೋಗುವ ಕಲೆಯನ್ನು ಯುವ ಜನತೆಯಿಂದ ಉಳಿಸಲು ಸಾದ್ಯ, ನಮ್ಮ ನೆಲದ ಕಲೆಯನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ಮಲೆನಾಡಿನ ಎಲೆಮರೆಯ ಕಲೆಯನ್ನು ಜಾನಪದ ಪರಿಷತ್ ಗಮನಕ್ಕೆ ತಂದಲ್ಲಿ ಅಂಥಹ ಪ್ರತಿಭೆಗಳನ್ನು ಮುಖ್ಯ ವೇದಿಕೆಗೆ ಪರಿಚಯಿಸುವ ಕೆಲಸ ಕರ್ನಾಟಕ ಜಾನಪದ ಪರಿಷತ್ ಮಾಡಲಿದೆ ಎಂದು ರಜಿತ್ ಕೆಳಗೂರ್ ಅಭಿಪ್ರಾಯಪಟ್ಟರು .
ಈ ಕಾರ್ಯಕ್ರಮದಲ್ಲಿ ಶಿಬಿರದ ಮುಖ್ಯಸ್ಥರಾದ ವಿಕ್ಕಿ ಹಾಗು ತಂಡದವರು ಜಾನಪದ ಪರಿಷತ್ತಿನ ಸದಸ್ಯರಾದ ನಿಕಿತಾ ಸಂತೋಷ್ ಜೈನ್, ನಾಗಮಣಿ, ಪ್ರಿಯಾ ಗುರುಪ್ರಸಾದ್, ಗಿರಿಜಾ ಇತರರು ಇದ್ದರು.
