ಕಳಸ ಲೈವ್ ವರದಿ
ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿ, 98 ಶೇಕಡ ಅಂಕ ಪಿಯುಸಿಯಲ್ಲಿ ಪಡೆದಿದ್ದ ತನ್ಮಯ್ ಶರ್ಮ ಸಿಇಟಿ ಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 799 ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
180 ಅಂಕಗಳಿಗೆ 151 ಅಂಕ ಪಡೆದ ತನ್ಮಯ್ ಶರ್ಮ ಸುಮಾರು 3.11 ಲಕ್ಷ ಜನ ವಿದ್ಯಾರ್ಥಿಗಳ ಪೈಕಿ, 799 ರ್ಯಾಂಕ್ ಪಡೆದ ಇವರ ಸಾಧನೆ ಶ್ಲಾಘನೀಯ. ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಮಾಡುವ ಆಕಾಂಕ್ಷೆ ಇವರು ಹೊಂದಿದ್ದಾರೆ.
ತನ್ಮಯ್ ಶರ್ಮ ಕಳಸದ ಗುಪ್ತಚರ ಇಲಾಖಾ ಎಎಸೈ ಗಿರೀಶ್ ಶ್ರೀಮತಿ ಸುಮಾ ರವರ ಪುತ್ರ. ಗಿರೀಶ್ ಕೂಡ ಈ ಬಾರಿ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಭಾಜನರಾಗಿದ್ದರು.
