ಕಳಸ ಲೈವ್ ವರದಿ
ಕೂಟಮಹಾ ಜಗತ್ತು ಸಾಲಿಗ್ರಾಮ ಕಳಸ-ಬಾಳೆಹೊಳೆ ಅಂಗ ಸಂಸ್ಥೆಯ ವತಿಯಿಂದ ಮಾವಿನಕುಡಿಗೆಯ ದಿವಂಗತ ವೇದಬ್ರಹ್ಮ ಶ್ರೀ ಸುಬ್ರಹ್ಮಣ್ಯ ಭಟ್ಟರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಹಾಗೂ ತಲಗೋಡಿನ ದಿವಂಗತ ಜಯಗಣಪತಿ ಹೆಬ್ಬಾರ್ ಅವರಿಗೆ ‘ನುಡಿ ನಮನ’ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ದಿನಾಂಕ 21-03-2026 ಶನಿವಾರ ಸಂಜೆ 4:30ಕ್ಕೆ ಬಾಳೆಹೊಳೆಯ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರುಗಲಿದೆ.
ಹೊರನಾಡಿನ ಶ್ರೀಕ್ಷೇತ್ರದ ಧರ್ಮಕರ್ತರಾದ ಪೂಜ್ಯಶ್ರೀ ಭೀಮೇಶ್ವರ ಜೋಷಿ ಅವರುಗೌರವ ಉಪಸ್ಥಿತಿ ಇರಲಿದ್ದಾರೆ. ಕೂಟಮಹಾ ಜಗತ್ತು ಕಳಸ-ಬಾಳೆಹೊಳೆ ಅಂಗಸAಸ್ಥೆಯ ಅಧ್ಯಕ್ಷರಾದ ಶ್ರೀ ಕೆ. ಕೆ. ಬಾಲಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಗಣೇಶಮೂರ್ತಿ ನಾವುಡ, ಕರ್ನಾಟಕ ಬ್ಯಾಂಕಿನ ನಿವೃತ್ತ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಮಹಾಬಲೇಶ್ವರ ಭಟ್ ಎಂ.ಎಸ್., ಶ್ರೀಮತಿ ಶಾರದಾ ಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಲೀಲಾವತಿ ಜಯಗಣಪತಿ ಹೆಬ್ಬಾರ್ ಅವರು ಉಪಸ್ಥಿತರಿರಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷರು ಹಾಗೂ ಸದಸ್ಯರು ಕೋರಿದ್ದಾರೆ.
