oplus_2097152
ಕಳಸ ಲೈವ್ ವರದಿ
ಕಳಸ ಕರ್ನಾಟಕ ಬ್ಯಾಂಕ್ ನಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳಸದ ಜನರ ಹೃದಯ ಗೆದ್ದು ಇದೀಗ ಕಮ್ಮರಡಿ ಬ್ರಾಂಚ್ಗೆ ವರ್ಗಾವಣೆಗೊಂಡ ರಾಜರಾಮ್ ಅವರನ್ನು ಡಾ|ರಾಜ್ ಕನ್ನಡ ಸಂಘ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ದಿಂದ ಗೌರವಿಸಿ ಬಿಳ್ಕೊಡಲಾಯಿತು.
ಕಳಸ ಬ್ರಾಂಚ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು ಕಳಸ ಕರ್ನಾಟಕ ಬ್ಯಾಂಕ್ ಜನಸ್ನೇಹಿಯಾಗಲು ಕರಣೀಭೂತರಾಗಿದ್ದರು.
ಇವರ ಉತ್ತಮ ಸೇವೆಯನ್ನು ಗಮನಿಸಿ ಇತ್ತೀಚೆಗೆ ಕಳಸದಲ್ಲಿ ನಡೆದ ಕಳಸ ಬಸದಿಯ ಪಂಚಕಲ್ಯಾಣ ಸಂದರ್ಭದಲ್ಲಿ ಗೌರವಿಸಲಾಗಿತ್ತು.
ಗೌರವ ಸ್ವೀಕರಿಸಿ ಮಾತನಾಡಿದ ರಾಜರಾಮ್ ಹುಟ್ಟುವಾಗಲೂ ಕಾಲಿ ಕೈಲಿ ಬಂದಿದ್ದೇವೆ, ಸಾಯುವಾಗಲೂ ಕಾಲಿ ಕೈಲಿ ಹೋಗುತ್ತೇವೆ ಮಧ್ಯೆ ಮೂರು ದಿನದ ಬದುಕಲ್ಲಿ ಉತ್ತಮ ಕೆಲಸವನ್ನು ಮಾಡಿ ಜನರಿಗೆ ಹತ್ತಿರವಾದರೆ ಮಾತ್ರ ಅದು ಜೀವಂತವಾಗಿರುತ್ತವೆ.ನಾವು ಮಾಡುವ ಕೆಲಸ ಯಾವತ್ತೂ ಮಾತನಾಡುವಂತಿರಬೇಕು ಎಂದರು.
ಕರವೇ ಗೌರವಾಧ್ಯಕ್ಷ ಶರೀಫ್ ಮಾತನಾಡಿ ಇಂತಹ ಬ್ಯಾಂಕ್ ಉದ್ಯೋಗಿಗಳು ಸಿಗುವುದು ಬಹಳ ಅಪರೂಪ.ಕಳಸ ಕರ್ನಾಟಕ ಬ್ಯಾಂಕ್ನ ಪ್ರತಿಯೊಬ್ಬ ಗ್ರಾಹಕರು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಧಿಕಾರಿಯಾಗಿದ್ದಾರೆ.ಮತ್ತೆ ಇದೇ ಊರಿಗೆ ಬ್ಯಾಂಕ್ ವ್ಯವಸ್ಥಾಪಕರಾಗಿ ಭಡ್ತಿ ಹೊಂದಿ ಬರಲಿ ಎಂದು ಹೇಳಿದರು.
ಡಾ|ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರವೇ ಅಧ್ಯಕ್ಷ ಚೌಡ ನಾಯ್ಕ್, ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಬ್ಯಾಂಕ್ ಉದ್ಯೋಗಿ ಪ್ರದೀಪ್ ಇತರರು ಇದ್ದರು.
