ಕಳಸ ಲೈವ್ ವರದಿ
ಕಳಸದ ಎಡೂರು ಗ್ರಾಮದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದವರ ಮೇಲೆ ಕಳಸ ಪೊಲೀಸರು ದಾಳಿ ನಡೆಸಿ ಸ್ಥಳಿಯರು ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಅಕ್ರಮ ಗೋ ಸಾಗಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದು ಕಳಸ ಪಿಎಸೈ ಚಂದ್ರಶೇಖರ್ ನೇತ್ರತ್ವದಲ್ಲಿ ದಾಳಿ ನಡೆಸಿ ಮೂರು ಜಾನುವಾರುಗಳ ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಾಟ ಮಾಡುತ್ತಿದ್ದ ಒರ್ವ ಸ್ಥಳಿಯ ಸೇರಿದಂತೆ ಇಬ್ಬರು ಪರಸ್ಥಳಿಯರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗೋ ಸಾಗಾಟಕ್ಕೆ ಬಳಸಿಕೊಂಡ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಕಾರ್ಯಚರಣೆಯಲ್ಲಿ ಶಿವಕುಮಾರ್, ಗಿರೀಶ್, ವಿಶ್ವನಾಥ ಪಾಳೆಗಾರ ಇದ್ದರು.
