ಕಳಸ ಲೈವ್ ವರದಿ
ಕಳಸ ಬೀಡಾ ವ್ಯಾಪಾರಿಯೆಂದೇ ಪ್ರಸಿದ್ಧಿಯನ್ನು ಪಡೆದ ಬೀಡಾ ಪುಟ್ಟಣ್ಣನ ಮಗ ಕೆ.ಪಿ.ಪೂಜಿತ್ ಕುಲಾಲ್ ಜೆ.ಇ.ಇ ಮೆನ್ಸ್ ಪರೀಕ್ಷೆಯಲ್ಲಿ ದೇಶಕ್ಕೆ 34ನೇ ಸ್ಥಾನ ಪಡೆದುಕೊಂಡಿದ್ದಾರೆ.
ಪೂಜಿತ್ ಒಂದರಿಂದ ಐದನೇ ತರಗತಿ ವರೆಗೆ ಕಳಸದ ಜೆಇಎಂ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ, 6ರಿಂದ 10ನೇ ತರಗತಿವರೆಗೆ ಬಾಳೆಹೊನ್ನೂರು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು.
ಪಿಯುಸಿಯನ್ನು ಚಿತ್ರದುರ್ಗದ ಎಸ್ಆರ್ಎಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಜೆ.ಇ.ಇ ಮೆನ್ಸ್ 42ನೇ ರ್ಯಾಂಕ್ ಪಡೆದು ಜೆ.ಇ.ಇ ಅಡ್ವಾನ್ಸ್ ನಲ್ಲಿ ದೇಶಕ್ಕೆ 34ನೇ ರ್ಯಾಂಕ್ ಪಡೆದುಕೊಂಡು,ಜನರಲ್ ಕರ್ನಾಟಕದಲ್ಲಿ ಮೊದಲನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪೂಜಿತ್ಗೆ ಎಸ್ಆರ್ಎಸ್ ಕಾಲೇಜು ಎರಡು ವರ್ಷಗಳ ಉಚಿತ ಶಿಕ್ಷಣವನ್ನು ನೀಡಿತ್ತು.
ಕಾಲೇಜಿನ ಎಲ್ಲಾ ಬೋಧಕರು ಮತ್ತು ಸಂಸ್ಥೆ ಸಾಕಷ್ಟು ಸಹಕಾರ ನೀಡಿದ್ದು, ಎರಡು ವರ್ಷಗಳ ಉಚಿತ ಶಿಕ್ಷಣವನ್ನು ನೀಡಿದೆ, ಈ ಶಿಕ್ಷಣ ಸಂಸ್ಥೆಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಪೂಜಿತ್ ಪೋಷಕರಾದ ಪುಟ್ಟಣ್ಣ ಮತ್ತು ವಿನುತಾ ಹೇಳುತ್ತಾರೆ.
