
ಕಳಸ ಲೈವ್ ವರದಿ
ಛತ್ತಿಸಘಡ ರಾಜ್ಯದ ರಾಯಪುರದಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ರಾಷ್ಟೀಯ ಕಾರ್ಯಕಾರಿ ಪರಿಷತ್ ನಲ್ಲಿ ರಾಷ್ಟೀಯ ಅಧ್ಯಕ್ಷರಾದ ಡಾ ರಾಜ್ ಶರಣ್ ಶಾಹಿ ಅವರು, ಎಬಿವಿಪಿ ಕೇಂದ್ರ ಕಾರ್ಯಸಮಿತಿ ಸದಸ್ಯರಾಗಿರುವ ಮಣಿಕಂಠ ಕಳಸ ಅವರನ್ನು ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾಗಿ ಘೋಷಣೆ ಮಾಡಿದ್ದಾರೆ.
ಮಣಿಕಂಠ ಕಳಸ ಮಂಗಳೂರಿನಲ್ಲಿ ಎಸ್ಡಿಎಮ್ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡುವ ಸಂಧರ್ಭದಿಂದ ಸಕ್ರಿಯವಾಗಿ ವಿದ್ಯಾರ್ಥಿ ಪರಿಷತ್ ನಲ್ಲಿ ಗುರುತಿಸಿಕೊಂಡು ಸಾಮಾನ್ಯ ಕಾರ್ಯಕರ್ತನಿಂದ ಮಂಗಳೂರು ಕಾರ್ಯದರ್ಶಿಯಾಗಿ ರಾಜ್ಯ ಸಹಕಾರ್ಯದರ್ಶಿಯಾಗಿ, 2 ಅವಧಿಗೆ ರಾಜ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ಸಂಸೆ ಸಮೀದ ಬಸ್ರಿಕಲ್ ಗ್ರಾಮದ ಉಪ್ಪಿನಗದ್ದೆಯ ಪಾರ್ವತಿ ಮತ್ತು ಚಂದ್ರೆಗೌಡ ಅವರ ಮಗನಾಗಿರುವ ಇವರು, ಕಾನೂನು ಪದವಿ ಮುಗಿಸಿ ವಕೀಲರಾಗಿದ್ದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಕಳೆದ 3 ವರ್ಷಗಳಿಂದ ಹುಬ್ಬಳ್ಳಿ ಕೇಂದ್ರವಾಗಿರಿಸಿಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯವನ್ನು ನಿರ್ವಹಿಸಿದ್ದು, ನೇಹಾ ಹಿರೇಮಠ್ ಹತ್ಯೆಯ ಸಂಧರ್ಭ ಹೋರಾಟದ ನೇತೃತ್ವ ವಹಿಸಿದ್ದರು, ವಿಶ್ವ ವಿದ್ಯಾಲಯಗಳ ಉಳಿವಿಗಾಗಿ, ಪಠ್ಯ ಪುಸ್ತಕದಲ್ಲಿ ಕನ್ನಡಾಂಬೆ ಮತ್ತು ಭಾರತ ಮಾತೆಗೆ ಅವಮಾನಸಿದ ಸಂಧರ್ಭದಲ್ಲಿ ಇನ್ನೂ ಅನೇಕ ಹೋರಾಟಗಳನ್ನು ರೂಪಿಸಿ ಯಶಸ್ವಿಯಾಗಿವಂತೆ ಮಾಡಿದ್ದಾರೆ.
ಪ್ರಸ್ತುತ ಕೇಂದ್ರೀಯ ಕಾರ್ಯ ಸಮಿತಿಯ ಸದಸ್ಯರಾಗಿ ಮತ್ತು ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾಗಿ ಮಣಿಕಂಠ ಕಳಸ ಅವರು ಕಾರ್ಯವನ್ನು ನಿರ್ವಹಿಸಲಿದ್ದಾರೆ.
