
ಕಳಸ ಲೈವ್ ವರದಿ
ಮಲೆನಾಡಿನ ಮಡಿಲು ಕಳಸ ತಾಲೂಕಿನ ಕುದುರೆಮುಖ, ಲೇಬರ್ ಕಾಲೋನಿ, ಜಾಂಬಳೆ ಶಾಲೆ ಹಾಗೂ ಜಾಂಬಳೆ ಸೇತುವೆಯ ಸುತ್ತಮುತ್ತ ಚಿತ್ರೀಕರಿಸಲಾದ “ನಕ್ಷತ್ರ” ಕಿರುಚಿತ್ರ ರಾಜ್ಯಮಟ್ಟದ ಹಾಸನಾಂಬ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆದಿದೆ.
ರಾಜ್ಯಾದ್ಯಂತದಿಂದ ಸ್ಪರ್ಧೆಗೆ ಬಂದ ನೂರಾರು ಕಿರುಚಿತ್ರಗಳಲ್ಲಿ “ನಕ್ಷತ್ರ” ಕಿರುಚಿತ್ರವು ಟಾಪ್ 10 ಅತ್ಯುತ್ತಮ ಕಿರುಚಿತ್ರಗಳ ಪೈಕಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಚಲನಚಿತ್ರೋತ್ಸವದ ಅಂತಿಮ ಹಂತದಲ್ಲಿ ಪ್ರದರ್ಶನಗೊಂಡ ಈ ಕಿರುಚಿತ್ರವು ಸಮಗ್ರ ವಿಭಾಗದ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಮಲೆನಾಡಿನ ಕಳಸದ ಹೆಸರನ್ನು ರಾಜ್ಯ ಮಟ್ಟದಲ್ಲಿ ಮೆರೆದಿದೆ.
ಈ ಕಿರುಚಿತ್ರದ ಕಥಾಹಂದರ ಗ್ರಾಮೀಣ ಪ್ರತಿಭೆ, ಪರಿಸರ ಹಾಗೂ ಸಾಮಾಜಿಕ ಬದಲಾವಣೆಯ ಹಿನ್ನೆಲೆಯಲ್ಲಿದೆ. ಸ್ಥಳೀಯ ಯುವ ಪ್ರತಿಭೆಗಳ ಸೃಜನಶೀಲ ಪ್ರಯತ್ನದಿಂದ ಮೂಡಿ ಬಂದಿರುವ ಈ ಚಿತ್ರಕ್ಕೆ ತೀರ್ಪುಗಾರರಿಂದ ಶ್ಲಾಘನೆ ದೊರೆಯಿತು.
ನಿರ್ದೇಶಕ, ಕಥೆಗಾರ ಹಾಗೂ ತಾಂತ್ರಿಕ ತಂಡದ ಸದಸ್ಯರು ಕಳಸ, ಬಾಳೆಹೊನ್ನೂರು, ಜಾಂಬಳೆ ಪ್ರದೇಶದ ಯುವಕರು ಆಗಿದ್ದು, ತಮ್ಮದೇ ಊರಿನ ಸೌಂದರ್ಯ, ಸಂಸ್ಕೃತಿ ಮತ್ತು ಮಾನವೀಯ ಹಾದಿಯನ್ನು ಚಿತ್ರದಲ್ಲಿ ಪ್ರಸ್ತುತಪಡಿಸಿದ್ದಾರೆ.
ಪ್ರಶಸ್ತಿಯೊಂದಿಗೆ ತಂಡದ ಸದಸ್ಯರಿಗೆ ಪ್ರಮಾಣಪತ್ರ ಪ್ರಧಾನ ಮಾಡಲಾಯಿತು. ಈ ಯಶಸ್ಸು ಕಳಸ ತಾಲೂಕಿನ ಯುವ ಪ್ರತಿಭೆಗಳಿಗೆ ಮತ್ತೊಂದು ಪ್ರೋತ್ಸಾಹದ ನುಡಿ ಎಂದು ನೆಲ್ಲಿಬೀಡು ತೇಜಸ್ ಜೈನ್ ವ್ಯಕ್ತಪಡಿಸಿದ್ದಾರೆ.
ರಚನೆ ಮತ್ತು ನಿರ್ದೇಶನ – ವಿಕ್ಕಿ ಕುದುರೆಮುಖ
- ಕ್ಯಾಮೆರಾ – ಶ್ರೀಹರಿ
ಸಂಕಲನ – ಬಿಲ್ವಾ ಸ್ಟುಡಿಯೋಸ್
ಕಲರ್ ಗ್ರೇಡಿಂಗ್ – ಮುರುಗ
Subtitles – ಆಶಾ ಕೃಷ್ಣಸ್ವಾಮಿ
ಸಂಗೀತ – ಸತ್ಯ ರಾಧಾಕೃಷ್ಣ
ಸೌಂಡ್ಸ್ – ಶಶಿಕಲಾವಿದರು :ಸಮೃದ್ಧಿ ಕುಂದಾಪುರ,ಸಂದೀಪ್ ಜೈನ್,ಮಂದಾರ ಭಟ್,ಸೃಷ್ಟಿ,ರವಿ ಕುದುರೆಮುಖ,ಕಲ್ಲೇಶ್ ಕುದುರೆಮುಖ,ನೇತ್ರಾ ಕುದುರೆಮುಖ,ಕೃಷ್ಣಪ್ಪ ಕುದುರೆಮುಖ.