
ಕಳಸ ಲೈವ್ ವರದಿ
ಈ ವರ್ಷ ಮಳೆಯು ಹಬ್ಬಗಳಿಗೂ ಹಂಚಿಕೊಂಡಂತೆ ಕಾಣುತ್ತಿದೆ. ಹಬ್ಬದ ದಿನಗಳಲ್ಲೇ ಮೋಡದ ನೆರಳು ಮಳೆಯ ಹನಿ ಸುರಿಯುತ್ತಾ ಜನರ ಸಂಭ್ರಮಕ್ಕೆ ತಂಪು ಹಚ್ಚಿ, ಹಬ್ಬದ ದೀಪಗಳ ನಡುವೆ ಮಳೆಯ ಕರಿಮೋಡ ಛಾಯೆ ವ್ಯಾಪಿಸಿದೆ.
ಈ ಬಾರಿ ಹಬ್ಬದ ದಿನಗಳು ಮಳೆಗಾಲದ ಛಾಯೆಯಲ್ಲೇ ಕಳೆಯುತ್ತಿವೆ. ಗಣೇಶ ಚತುರ್ಥಿ, ನವರಾತ್ರಿ, ದಸರಾ ಎಲ್ಲ ಹಬ್ಬಗಳಿಗೂ ಮಳೆಯ ತೊಂದರೆ ಕಡ್ಡಾಯದಂತಾಗಿದೆ. ಈಗ ದೀಪಾವಳಿಯ ಬೆಳಕಿಗೂ ಕರಿಮೋಡದ ನೆರಳು ಸೇರಿಕೊಂಡಿದೆ. ಬೆಳಕಿನ ಹಬ್ಬವಾದ ದೀಪಾವಳಿಯ ದಿನವೂ ಆಕಾಶದಲ್ಲಿ ಸೂರ್ಯನ ಕಿರಣ ಕಾಣದೇ, ಬದಲಿಗೆ ಮಳೆಯ ಹನಿ ಪಟಾಕಿಗಳ ಹೊಗೆಗೆ ಬೆರೆತು ವಿಭಿನ್ನ ವಾತಾವರಣ ಸೃಷ್ಟಿಸಿದೆ.ಹವಮಾನ ಇಲಾಖೆಯ ವರದಿ ಪ್ರಕಾರ ಈ ಮಳೆ ಇನ್ನು ಹತ್ತು ದಿನಗಳ ಕಾಲ ಮುಂದುವರೆಯಲಿದೆ.
ಹಬ್ಬದ ಖರೀದಿಗೆ ಹೊರಟ ಜನರು ಛತ್ರಿಗಳೊಂದಿಗೆ ವ್ಯಾಪಾರ ಬೀದಿಗಳಲ್ಲಿ ಸಂಚರಿಸುತ್ತಾ, ಮಳೆಯಿಂದ ತಡೆಯಿಲ್ಲದೆ ಹಬ್ಬದ ಸಿದ್ಧತೆಯಲ್ಲಿದ್ದಾರೆ. ಕೆಲವರು “ಮಳೆ ಬಂದರೂ ಹಬ್ಬದ ಖುಷಿಗೆ ತಡೆಯಿಲ್ಲ” ಎಂದು ನಗುತ್ತಾ ಹೇಳುತ್ತಾರೆ.
ಮಳೆಯ ತಂಪು ಹಬ್ಬದ ಸಂಭ್ರಮವನ್ನು ಕುಂದಿಸಿದAತಿದ್ದರೂ, ಪ್ರಕೃತಿಯ ಹಸಿರು ಸೌಂದರ್ಯ ಅದಕ್ಕೆ ಹೊಸ ಸೊಬಗು ನೀಡುತ್ತಿದೆ.