
ಕಳಸ ಲೈವ್ ವರದಿ
ದೀಪಾವಳಿ ಹಬ್ಬದ ಬೆಳಕು ಈಗಾಗಲೇ ಕಳಸದ ಕೆಪಿಎಸ್ ಪ್ರೌಢಶಾಲಾ ಕ್ರೀಡಾಂಗಣದ ಸುತ್ತ ಮಿನುಗುತ್ತಿದೆ. ಮಳೆಯ ತೊಂದರೆಗಳ ನಡುವೆ ಈ ಬಾರಿ ಪಟಾಕಿ ವ್ಯಾಪಾರಿಗಳು ಹೊಸ ಉತ್ಸಾಹದೊಂದಿಗೆ ಮೈದಾನ ತುಂಬಿದ್ದಾರೆ. ಕಳೆದ ವರ್ಷಕ್ಕಿಂತ ಅಂಗಡಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಹಬ್ಬದ ಚೈತನ್ಯವೂ ಅದಕ್ಕೆ ತಕ್ಕಂತೆ ಮೂಡಿಬಂದಿದೆ.
ಮಳೆ ಬಿಂದುಗಳು ಬೀಳುತ್ತಿದ್ದರೂ ಖರೀದಿದಾರರ ಉತ್ಸಾಹ ಕಡಿಮೆಯಾಗಿಲ್ಲ. ಅನಾರ, ಸರ್ಪಿಣಿ, ಚಕ್ರ, ರಾಕೆಟ್, ಸ್ಪಾರ್ಕ್ಗಳಂತಹ ಪಟಾಕಿಗಳು ಮಕ್ಕಳ ಕಣ್ಣುಗಳಲ್ಲಿ ಹೊಳಪು ಮೂಡಿಸುತ್ತಿವೆ. ಕೆಲ ವ್ಯಾಪಾರಿಗಳು ಗ್ರಾಹಕರ ಸೌಲಭ್ಯಕ್ಕಾಗಿ ಪಟಾಕಿಗಳನ್ನು ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಆರಂಭಿಸಿದ್ದು, ಇದು ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ.
ಮಳೆ ಇರಲಿ, ತೇವ ಇರಲಿ ಹಬ್ಬದ ಸಂಭ್ರಮಕ್ಕೆ ಅಡ್ಡಿ ಇಲ್ಲ. ಜನರ ಪ್ರತಿಕ್ರಿಯೆ ಉತ್ಸಾಹಭರಿತವಾಗಿದೆ,”
ಬೆಳಿಗ್ಗೆ 8ರಿಂದ ರಾತ್ರಿ 9ರ ವರೆಗೂ ಅಂಗಡಿ ಮಳಿಗೆಗಳು ತೆರೆದು ಗ್ರಾಹಕರಿಗೆ ಪಟಾಕಿ ನೀಡಲಾಗುತ್ತಿದೆ. ಇನ್ಯಾಕೆ ತಡ ಬನ್ನಿ ನಿಮ್ಮ ಆಯ್ಕೆಯ ಅಂಗಡಿ ಬೇಟಿ ನೀಡಿ ಪಟಾಕಿಗಳನ್ನು ಕೊಂಡೋಯ್ತು ಅದ್ದೂರಿ ಹಬ್ಬ ಆಚರಿಸಿ.