ಕಳಸ:ಹಿಂದೂ ಧರ್ಮ,ಇದು ಯಾವುದೇ ಮೂಢನಂಬಿಕೆಗಳ ಧರ್ಮ ಅಲ್ಲ.ಇದು ಅತ್ಯಂತ ಉತ್ಕøಷ್ಠವಾದ ಧರ್ಮ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಕಳಸ ತಾಲ್ಲೂಕಿನ ಕೆ.ಕೆಳಗೂರು ಕಾರಕ್ಕಿ-ಹೊಸಗದ್ದೆಯ ಶ್ರೀಭದ್ರಾ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ನಡೆದ ಶ್ರೀ ಭದ್ರಾ ಮಹಾಗಣಪತಿ ಮತ್ತು ಪರಿವಾರ ದೇವರ ಜೀರ್ಣೋದ್ಧಾರ,ಪುನರಷ್ಟಬಂಧ,ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕ ನಡೆಸಿ ಆಶೀರ್ವಚನ ನೀಡಿದ ಅವರು ವಿಶೇಷವಾದ ಪರಂಪರೆ ನಮ್ಮ ಹಿಂದೂ ಧರ್ಮದಲ್ಲಿದೆ.ಇದರ ಮಹತ್ವವನ್ನು ತಿಳಿದುಕೊಳ್ಳಬೇಕು.ಹಿಂದೂ ಧರ್ಮದಲ್ಲಿ ಬಂದಿರುವ ಆಚರಣೆಗಳನ್ನು ನಾವು ಪಾಲಿಸುವುದಲ್ಲದೆ ನಮ್ಮ ಮಕ್ಕಳಿಗೆ ತಿಳಿಸಿಕೊಡುವುದರ ಮೂಲಕ ನಾವು ಜೀವನವನ್ನು ನಡೆಸಬೇಕು ಎಂದು ಹೇಳಿದರು.
ಇದಕ್ಕಿಂತ ಮುಂಚಿತವಾಗಿ ದೇವಸ್ಥಾನದಲ್ಲಿ ಶಾಂತಿ ಹೋಮ,ಪ್ರಾಯಶ್ಚಿತ್ತಹೋಮ ಮತ್ತು ಸಪರಿವಾರ ಶ್ರೀ ಮಹಾಗಣಪತಿ ದೇವರಿಗೆ ಜಗದ್ಗುರು ಮಹಾಸ್ವಾಮಿಗಳಿಂದ ಬ್ರಹ್ಮಕುಂಭಾಭಿಷೇಕ ಮಹಾಪೂಜೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೆ.ಕೆಳಗೂರು,ಕಾರಕ್ಕಿ,ಮನ್ನೂರುಪಾಲ್ ಬಾಳೆಹೊಳೆ,ಹಿರೇಬೈಲು,ಕಳಸ ಮುಂತಾದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
