ಕಳಸ ಲೈವ್ ವರದಿ
ಕಳಕೋಡು ಕಾಫಿ ಬೆಳೆಗಾರರಾದ ಕೆಸಿ.ಧರಣೇಂದ್ರಯ್ಯ ಅವರಿಗೆ ಸರ್ವೋದಯ ಜೈನ ತೀರ್ಥ ಸಮಿತಿ ವತಿಯಿಂದ “ಧರ್ಮರತ್ನಾಕರ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಇಲ್ಲಿಯ ಕೆಳಂಗಡಿ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿಯ ಪ್ರಥಮ ವರ್ಷದ ವಾರ್ಷಿಕ ಪೂಜಾ ಮಹೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಕಳೆದ 9 ವರ್ಷಗಳಿಂದ ಚಂದ್ರನಾಥ ಸ್ವಾಮಿ ಬಸದಿಯ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಸುಮಾರು 10 ಕೋಟಿಗೂ ವೆಚ್ಚದ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿಯ ಕ್ಷೇತ್ರಪಾಲ ಮತ್ತು ಧರ್ಮದೇವತೆಗಳ ಸುಂದರ ಶೀಲಾಮಯ ಬಸದಿಯ ನಿರ್ಮಾಕ್ಕೆ ಕಾರಣಕರ್ತರಾಗಿದ್ದರು.ಅಲ್ಲದೆ ಬಸದಿಯ ನಿರ್ಮಾಣಕ್ಕೆ 1 ಕೋಟಿ ರೂ ದೇಣಿಗೆಯನ್ನು ಕೂಡ ನೀಡಿದ್ದರು.
ಕೊಡುಗೈ ದಾನಿಯಾಗಿದ್ದ ಇವರು ಜೈನ ಸಮುದಾಯವಲ್ಲದೆ ಇತರೆ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೂ ಸಾಕಷ್ಟು ದೇಣಿಗೆಯನ್ನು ನೀಡಿದ್ದಾರೆ.
ಇವರ ನಿಶ್ವಾರ್ಥ ಸೇವೆಯನ್ನು ಗಮನಿಸಿ ಈ ಗೌರವವನ್ನು ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಸವೋದಯ ತೀರ್ಥಸಮಿತಿ ಅಧ್ಯಕ್ಷರಾದ ಭೋಜರಾಜ್ ಬರ್ಗಲ್,ಉಪಾಧ್ಯಕ್ಷ ಅನಿಲ್ ಕುಮಾರ್ ಕಾರ್ಯದರ್ಶಿ ವಿನಯ್, ಸಹ ಕಾರ್ಯದರ್ಶಿ ಅನಿಲ್, ಖಜಾಂಚಿ ಧರಣೇಂದ್ರ ಹೆಬ್ಳೂರು, ಕೆ.ಸಿ ವಿಜಯ ಕುಮಾರ್, ಸುರೇಶ್ ಕುಮಾರ್, ಹರ್ಷೇಂದ್ರ, ಸುದರ್ಶನ್, ಪ್ರಸಿದ್ದ ಜೈನ್, ಅಜಿತ್ ಕುಮಾರ್, ಜಿತೇಂದ್ರ, ಸುಜಿತ್ ಬರ್ಗಲ್, ಭರತ್ರಾಜ್, ಅಜಿತ್ ಪ್ರಸಾದ್ ಇತರರು ಇದ್ದರು.
