ಕಳಸ ಲೈವ್ ವರದಿ
ಪ್ರಸಿದ್ಧ ದೈವಸ್ಥಾನವಾದ ಕುಂಬಳಡಿಕೆಯ ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಗುಳಿಗ ದೈವದ ಸಾನಿಧ್ಯದಲ್ಲಿ ಈ ತಿಂಗಳ ಸಂಕ್ರಾಂತಿ ಪೂಜಾ ಮಹೋತ್ಸವವು ಜೂನ್ 15ರ ಸೋಮವಾರದಂದು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಜರುಗಲಿದೆ.
ಅಂದು ಬೆಳಿಗ್ಗೆ 10:30 ಕ್ಕೆ: ಸಂಕ್ರಾಂತಿ ವಿಶೇಷ ಪೂಜೆ ಆರಂಭಗೊಳ್ಳಲಿದೆ.
ಸಂಜೆ 6:30 ಕ್ಕೆ: ಭಕ್ತರಿಂದ ಹರಕೆಯ ರೂಪದ ‘ಅಗೆಲು ಸೇವೆ’ ನೆರವೇರಲಿದೆ.
ರಾತ್ರಿ 8:30 ಕ್ಕೆ: ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ಮಾಡಲಾಗುವುದು.
ಕೊರಗಜ್ಜ ಹರಕೆ ಅಗೆಲು ಸೇವೆ ಮಾಡಿಸುವ ಭಕ್ತರು ಎರಡು ದಿನದ ಮುಂಚಿತವಾಗಿ ಸಮಿತಿಗೆ ತಿಳಿಸಬೇಕು.
