ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಹದವಾದ ಮಳೆ ಮುಂದುವರೆದಿದ್ದು, ಜನಜೀವನ ಹಾಗೂ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಸಣ್ಣಪುಟ್ಟ ಅನಾಹುತಗಳು ಸಂಭವಿಸುತ್ತಿರುವ ವರದಿಯಾಗಿದೆ.
ಕಳಸ ಸಮೀಪದ ಓಣಿಗಂಡಿ ಹೋಗುವ ರಸ್ತೆಯ ಅಂಚಿನಲ್ಲಿರುವ ಮೂಕಾಂಬಿಕ ಎಂಬುವವರ ಮನೆಗೆ ಹೊಂದಿಕೊAಡಿದ್ದ ಕಲ್ಲಿನ ಕಟ್ಟೆಯೊಂದು ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ. ಕಟ್ಟೆ ಕುಸಿದಿರುವುದರಿಂದ ಪಕ್ಕದಲ್ಲೇ ಇರುವ ಮೂಕಾಂಬಿಕ ಅವರ ಮನೆಗೂ ಹಾನಿಯಾಗುವ ಸಾಧ್ಯತೆ ಇದ್ದು, ಮನೆಯ ನಿವಾಸಿಗಳಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
